ಮಧುಮೇಹಿಗಳೇ ಗಮನಿಸಿ: ಈ ಎಲೆ ಸೇವಿಸಿದ್ರೆ ಥಟ್ ಅಂತ ಕಂಟ್ರೋಲ್ ಆಗುತ್ತೆ ಶುಗರ್!

ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ವೇಗವಾಗಿ ಹರಡುತ್ತಿದೆ. ವಯಸ್ಸಿನ ಭೇದವಿಲ್ಲದೆ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.
ಮಧುಮೇಹ ಒಂದು ಮಾರಣಾಂತಿಕ ಕಾಯಿಲೆ, ಅದನ್ನು ಕಂಟ್ರೋಲ್‌ನಲ್ಲಿಡದೆ ಇದ್ದರೆ ನಿಮಗೆ ಹೃದಯಾಘಾತ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.
ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು, ಜೀವನಶೈಲಿ ಹಾಗು ಆಹಾರ ಪದ್ದತಿ ಬಹಳ ಮುಖ್ಯ. ಅದರಂತೆ ಪೇರಲ ಎಲೆಗಳು ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಅಂಶಗಳಿಂದ ಸಮೃದ್ಧವಾಗಿದೆ. ಪೇರಲ ಎಲೆಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಕಡಿಮೆ ಮಾಡಬಲ್ಲ ಶಕ್ತಿ ಇದೆ.
ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳಿಂದ ಚಹಾ ತಯಾರಿಸಿ ಕುಡಿಯುವುದರಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
ಪೇರಲ ಎಲೆಗಳ ಚಹಾ ಕುಡಿಯುವುದರಿಂದ ಮಧುಮೇಹವಷ್ಟೇ ಅಲ್ಲ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






