Darshan Bail: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ: ಇವತ್ತಾದರೂ “ದಾಸ”ನಿಗೆ ಸಿಗುತ್ತಾ ಬೇಲ್?

ಡಿ ಬಾಸ್ ಅಂತ ಮೆರೆದಿದ್ದ ದರ್ಶನ್, ರೇಣುಕಾಸ್ವಾಮಿಯ ಬರ್ಭರ ಹತ್ಯೆ ಪ್ರಕರಣದಲ್ಲಿ ಜೈಲ್ ಸೇರಿ 120ಕ್ಕೂ ಹೆಚ್ಚು ದಿನಗಳು ಆಗಿದೆ.ಜೈಲ್ ಸೇರಿದ ದಿನದಿಂದ ಚಾರ್ಜ್ ಶೀಟ್ ಹಾಕೋವರೆಗೂ ಜಾಮೀನಿನ ಬಗ್ಗೆ ಚಕಾರ ಎತ್ತದದ ದರ್ಶನ್ ಇತ್ತೀಚೆಗೆ ಜಾಮೀನಿಗೆ ಅರ್ಜಿ ಹಾಕಿದ್ರು. ಜಾಮೀನು ಅರ್ಜಿ ವಿಚಾರಣೆಯಲ್ಲಿ ದರ್ಶನ್ ಪರ ಸಿನೀಯರ್ ಕೌನ್ಸೀಲ್ ಸಿ ವಿ ನಾಗೇಶ್ ಪ್ರಬಲ ವಾದ ಮಂಡನೆ ಮಾಡಿದ್ರು.
ಹಾಗಾದ್ರೆ ಸಿವಿ ನಾಗೇಶ್ ವಾದಕ್ಕೆ ದರ್ಶನ್ ಗೆ ಜಾಮೀನು ಸಿಗುತ್ತಾ? ಇಂದೂ ಸಹ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್. ನಿನ್ನೆ ಚಾರ್ಜ್ ಶೀಟ್ ನಲ್ಲಿನ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲಿದ್ದರು ಸಿವಿ ನಾಗೇಶ್, ಸ್ವ ಇಚ್ಚಾ ಹೇಳಿಕೆ , ಸ್ಪಾಟ್ ಮಹಜರ್, ಸೀಜ್ ಮಾಡಿದ ಐಟಮ್ ಗಳಿಗೆ ಸಾಮ್ಯತೆಯಿಲ್ಲ ಅಂತ ಕೋರ್ಟ್ ಗಮನಕ್ಕೆ ತಂದಿದ್ದರು.
ತನಿಖಾಧಿಕಾರಿ ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ. ಇದೊಂದು ವರ್ಸ್ಟ್ ಚಾರ್ಜ್ ಶೀಟ್ ಅಂತಾ ವಾದಿಸಿದ್ದ ಸಿವಿ ನಾಗೇಶ್ ಅವರು, ಇಂದು ವಾದ ಕಂಟಿನ್ಯೂ ಮಾಡೋದಾಗಿ ಹೇಳಿದ್ದರು. ಹೀಗಾಗಿ ಇಂದು ಮದ್ಯಾಹ್ನ ೧೨.೩೦ ಕ್ಕೆ ತಮ್ಮ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ವಕೀಲರು. ಸಿವಿ ನಾಗೇಶ್ ರ ವಾದ ಮುಗಿದ ಬಳಿಕ ತಮ್ಮ ವಾದ ಮಂಡಿಸಲಿದ್ದಾರೆ ಎಸ್ ಪಿಪಿ ಪ್ರಸನ್ನಕುಮಾರ್.
ನಿಮ್ಮ ಪ್ರತಿಕ್ರಿಯೆ ಏನು?






