ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ RCBಯ ಮಾಜಿ ಆಟಗಾರ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಅವರು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವ ಕ್ರಿಸ್ ಗೇಲ್, ಅವರೊಂದಿಗಿನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಗೌರವ. ಜಮೈಕಾ ಟು ಇಂಡಿಯಾ” ಎಂಬ ಶೀರ್ಷಿಕೆಯೊಂದಿಗೆ “OneLove” ಹ್ಯಾಶ್‌ಟ್ಯಾಗ್‌ನೊಂದಿಗೆ ಗೇಲ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ
ಕ್ರೀಸ್ ಗೇಲ್ ಕೂಡ ಜಮೈಕಾದವರಾಗಿದ್ದು, ಹೀಗಾಗಿ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಅವರೊಂದಿಗೆ ನಾಲ್ಕು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಜಮೈಕಾದ ನಾಯಕರೊಬ್ಬರು ಭಾರತಕ್ಕೆ ದ್ವಿಪಕ್ಷೀಯ ಚರ್ಚೆಗಾಗಿ ಭೇಟಿ ನೀಡಿದ್ದಾರೆ.
ಅತ್ತ ಭಾರತೀಯರಿಗೆ ಚಿರಪರಿಚಿತರಾಗಿರುವ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರನ್ನು ಸಹ ಪ್ರವಾಸದಲ್ಲಿ ಜಮೈಕಾ ಪ್ರಧಾನಿ ತಮ್ಮದೊಂದಿಗೆ ಸೇರಿಸಿಕೊಂಡಿದ್ದಾರೆ. ಏಕೆಂದರೆ ಜಮೈಕಾ ಮೂಲದವರಾಗಿರುವ ಗೇಲ್ ಕೇವಲ ಆಟಗಾರನಾಗಿ ಉಳಿದಿಲ್ಲ. ಕೆರಿಬಿಯನ್ ದ್ವೀಪದ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






