Kesari 2: ಮೊದಲ ದಿನ “ಕೇಸರಿ 2” ಬಾಕ್ಸ್‌ ಆಫೀಸಿನಲ್ಲಿ ಬೇಟೆಯಾಡಿದ್ದು ಎಷ್ಟು ಕೋಟಿ? ಮತ್ತೆ ಗೆದ್ದನೇ ಅಕ್ಷಯ್ ಕುಮಾರ್!

ಎಪ್ರಿಲ್ 19, 2025 - 21:19
 0  9
Kesari 2: ಮೊದಲ ದಿನ “ಕೇಸರಿ 2” ಬಾಕ್ಸ್‌ ಆಫೀಸಿನಲ್ಲಿ ಬೇಟೆಯಾಡಿದ್ದು ಎಷ್ಟು ಕೋಟಿ? ಮತ್ತೆ ಗೆದ್ದನೇ ಅಕ್ಷಯ್ ಕುಮಾರ್!

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ಸಿನಿಮಾ ಬಿಡುಗಡೆ ಆಗಿದೆ. ಜಲಿಯನ್ ವಾಲಾಭಾಗ್ ಘಟನೆಯ ನ್ಯಾಯಾಲಯ ವಿಚಾರಣೆಯ ಕತೆಯನ್ನು ಸಿನಿಮಾ ಒಳಗೊಂಡಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ರಕ್ತ ಸಿಕ್ತ ಅಧ್ಯಾಯವಾದ ‘ಜಲಿಯನ್ ವಾಲಾಭಾಗ್’ ಹತ್ಯಾಕಾಂಡ ಹಾಗೂ ಆ ಘಟನೆ ಕುರಿತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಕುರಿತಾದ ಕತೆಯನ್ನು ‘ಕೇಸರಿ 2’ ಸಿನಿಮಾ ಒಳಗೊಂಡಿದೆ. 

‘ಕೇಸರಿ 2’ ಸಿನಿಮಾ ಮೊದಲ ದಿನ ಸಾಧಾರಣ ಮೊತ್ತ ಕಲೆಕ್ಷನ್ ಮಾಡಿದೆ. ಬಿಡುಗಡೆ ಆದ ಮೊದಲ ದಿನ ಈ ಸಿನಿಮಾ ಗಳಿಸಿರುವುದು 7.50 ಕೋಟಿ ರೂಪಾಯಿ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಿಂದ ಸುಮಾರು 1.50 ಕೋಟಿ ಹಣ ಗಳಿಕೆಯಾಗಿತ್ತು. ಎಲ್ಲವೂ ಸೇರಿ ಮೊದಲ ದಿನಕ್ಕೆ ಕೇವಲ 7.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಆ ಮೂಲಕ ಅಕ್ಷಯ್ ಕುಮಾರ್ ಮತ್ತೊಂದು ಸಾಧಾರಣ ಓಪನಿಂಗ್ ಅನ್ನು ಪಡೆದುಕೊಂಡಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಸನ್ನಿ ಡಿಯೋಲ್​ರ ಜಾಟ್ ಸಿನಿಮಾ ಮೊದಲ ದಿನ 7.40 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

ಶುಕ್ರವಾರ ಗುಡ್ ಫ್ರೈಡೆ ರಜೆ ಇತ್ತು. ಹಾಗಿದ್ದರೂ ಸಹ ಜನ ಅಕ್ಷಯ್ ಕುಮಾರ್ ಅವರ ಸಿನಿಮಾ ನೋಡಲು ಆಸಕ್ತಿ ತೋರಿಸಿಲ್ಲ. ಮೊದಲ ದಿನ 7.50 ಕೋಟಿ ಸಾಧಾರಣ ಮೊತ್ತವಾದರೂ ನಿರಾಶಾದಾಯಕ ಮೊತ್ತವಲ್ಲ. ‘ಜಾಟ್’ ಸಿನಿಮಾ ರೀತಿ ಇದೇ ಸರಾಸರಿಯನ್ನು ಮುಂದುವರೆಸಿಕೊಂಡು ಹೋದಲ್ಲಿ ‘ಕೇಸರಿ 2’ ಸಿನಿಮಾ 50-60 ಕೋಟಿ ಕಲೆಕ್ಷನ್ ಅನ್ನು ಸುಲಭವಾಗಿ ದಾಟಿಕೊಳ್ಳಲಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow