Deleted Photo Recovery: ನಿಮ್ಮ ಫೋನ್’ನಲ್ಲಿ ಫೋಟೊ ಡಿಲೀಟ್ ಆದ್ರೆ ರಿಕವರಿ ಮಾಡೋದು ಹೇಗೆ? ಇಲ್ಲಿದೆ ನೋಡಿ

ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಂಗ್ರಹಿಸಿ ಇಟ್ಟುಕೊಂಡ ಅಥವಾ ಫೋನಿನಲ್ಲಿ ಸೆರೆಹಿಡಿದ ಫೋಟೊ ಮತ್ತು ವಿಡಿಯೋಗಳು ಗೊತ್ತಿಲ್ಲದೆ ಅಚಾನಕ್ ಆಗಿ ಡಿಲೀಟ್ ಆದರೆ ನಿಜಕ್ಕೂ ಇದು ಹೆಚ್ಚು ನೋವನ್ನು ಉಂಟುಮಾಡುತ್ತದೆ. ಆದರೆ ಹೀಗೆ ಆಕಸ್ಮಿಕವಾಗಿ ಸ್ಮಾರ್ಟ್ಫೋನಿನಲ್ಲಿನ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೇ,
ಆ ಫೈಲ್ಗಳನ್ನು ಮರಳಿ ಪಡೆಯಲು ಸಾಧ್ಯ ಎನ್ನುವದು ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರಿಗೆ ತಿಳಿಯದ ಸಂಗತಿ ಆಗಿದೆ. ಮ್ಮ ಫೋನ್ನಲ್ಲಿ ಡಿಲೀಟ್ ಆದ ಫೋಟೋಗಳು ಮತ್ತು ವಿಡಿಯೋಗಳನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಇದಕ್ಕಾಗಿ ನೀವು ಈ ಸುಲಭ ಹಂತಗಳನ್ನು ಅನುಸರಿಸಬೇಕು, ನಂತರ ನಿಮ್ಮ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳು ಪುನಃ ನಿಮಗೆ ಸಿಗುತ್ತದೆ.
ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ DiskDigger ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಈ ಅಪ್ಲಿಕೇಶನ್ ತೆರೆಯಿರಿ. ಇಲ್ಲಿ ನಿಮಗೆ ಎರಡು ಆಯ್ಕೆಗಳನ್ನ ತೋರಿಸಲಾಗುತ್ತದೆ, ಅದರಲ್ಲಿ ಮೊದಲ ಆಯ್ಕೆಯು ಫೋಟೋ ಮತ್ತು ಎರಡನೇ ಆಯ್ಕೆಯಲ್ಲಿ ನೀವು ವಿಡಿಯೋ ಕಾಣುತ್ತೀರಿ.
ಇಲ್ಲಿ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ನಿಮ್ಮ ಡಿಸ್ಪ್ಲೇ ಮೇಲೆ ತೋರಿಸಲಾಗುತ್ತದೆ. ಇದರಲ್ಲಿ ನೀವು ಕೆಲವು ದಿನಗಳ ಹಿಂದೆ ಡಿಲೀಟ್ ಮಾಡಿದ ಡೇಟಾವನ್ನು ಮಾತ್ರ ಮರಳಿ ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ. ನೀವು ವರ್ಷಗಳ ಹಿಂದೆ ಏನನ್ನಾದರೂ ಡಿಲೀಟ್ ಮಾಡಿದ್ದರೆ, ಅದನ್ನು ರಿಕವರಿ ಮಾಡಲು ಸಾಧ್ಯವಿಲ್ಲ.
ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ 3.5 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ, 100 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರು ಪ್ಲಾಟ್ಫಾರ್ಮ್ನಿಂದ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ್ದಾರೆ. ನೀವು ಈ ಅಪ್ಲಿಕೇಶನ್ ಅನ್ನು ಬಳಸಲು ಬಯಸಿದರೆ ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಅಪ್ಲಿಕೇಶನ್ನ ವಿಮರ್ಶೆ ಮತ್ತು ರೇಟಿಂಗ್ ಅನ್ನು ಒಮ್ಮೆ ಪರಿಶೀಲಿಸಿ. ಈ ಅಪ್ಲಿಕೇಶನ್ ನಿಮ್ಮ ಒಟ್ಟಾರೆ ಫೋಟೋಗಳು ಮತ್ತು ವಿಡಿಯೋಗಳಿಗೆ ಆ್ಯಕ್ಸಸ್ ಕೇಳುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






