ದುನಿಯಾ ವಿಜಯ್ ಪುತ್ರಿಗೆ ಒಲಿದ ಲಕ್: ದೊಡ್ಮನೆ ಕುಡಿ ಯುವ ಜೊತೆ ಸಿನಿಮಾ!?

ದುನಿಯಾ ವಿಜಯ್ ಪುತ್ರಿಗೆ ಲಕ್ ಒಲಿದಿದ್ದು ದೊಡ್ಮನೆ ಕುಡಿ ಜೊತೆ ನಟಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಸೂರಿ ಜೊತೆ ಯುವ ರಾಜ್ಕುಮಾರ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಯುವಗೆ ದುನಿಯಾ ವಿಜಯ್ ಪುತ್ರಿಗೆ ರಿತನ್ಯಾ ನಾಯಕಿಯಾಗಿದ್ದಾರೆ.
ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಯುವರಾಜ್ಕುಮಾರ್ ಹಾಗೂ ನಿರ್ದೇಶಕ ಸೂರಿ ಸಿನಿಮಾಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ಕುಮಾರ್ ಕ್ಲ್ಯಾಪ್ ಮಾಡಿದ್ದಾರೆ. ಅಪ್ಪು ಅವರ ಮಗಳು ಧೃತಿ ಕ್ಯಾಮೆರಾಗೆ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ದುನಿಯಾ, ಕೆಂಡಸಂಪಿಗೆ, ಬ್ಯಾಡ್ ಮ್ಯಾನರ್ಸ್, ಟಗರು ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರೋ ಸೂರಿ ಗರಡಿಯಲ್ಲಿ ಯುವ ಅವರು ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲ ಫ್ಯಾನ್ಸ್ಗೆ ಇದೆ. ದುನಿಯಾ ವಿಜಯ್ ಮೊದಲ ಪುತ್ರಿ ರಿತನ್ಯಾ ಈ ಚಿತ್ರದ ನಾಯಕಿಯಾಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






