ಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯಿರಿ: ಆಮೇಲೆ ಪ್ರಯೋಜನ ತಿಳಿಯಿರಿ

ಮೇ 31, 2025 - 07:00
 0  8
ಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯಿರಿ: ಆಮೇಲೆ ಪ್ರಯೋಜನ ತಿಳಿಯಿರಿ

ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿನ ಸೇವನೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆರೋಗ್ಯ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾದ ಬಿಸಿ ನೀರಿನ ಸೇವನೆ ಎಷ್ಟು ಮಯಖ್ಯ ಎನ್ನುವ ಮಾಹಿತಿ ಇಲ್ಲಿದೆ.
ಗಂಟಲು ನೋವು: ಚಳಿಗಾಲದಲ್ಲಿ ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಜೊತೆಗೆ ಶೀತದಿಂದ ಕಫ ಮತ್ತು ಕೆಮ್ಮು ತೊಂದರೆ ಆಗುತ್ತದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಬಿಸಿನೀರು ಉತ್ತಮ ಮಾರ್ಗ ಎನ್ನುತ್ತಾರೆ ತಜ್ಞರು.

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತೆ: ಜೀರ್ಣಾಂಗ ವ್ಯವಸ್ಥೆ ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ತಣ್ಣೀರಿಗಿಂತ ಬಿಸಿನೀರು ಆಹಾರ ಬೇಗ ಜೀರ್ಣವಾಗಲು ಸಹಕಾರಿಯಾಗಿದೆ. ಬಿಸಿನೀರು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಹೆಚ್ಚಿನ ಕ್ಯಾಲೋರಿಗಳು ಬರ್ನ್​ ಆಗುತ್ತದೆ. ಇದಲ್ಲದೆ, ಇದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಜೊತೆಗೆ ತೆಗೆದುಕೊಳ್ಳುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಸೈನಸ್ ಸಮಸ್ಯೆಗೆ ಪರಿಹಾರ: ಕೆಲವರಿಗೆ ಬೆಳಗ್ಗೆ ಮೂಗು ಕಟ್ಟಿಕೊಂಡಿರುತ್ತದೆ. ಉಸಿರಾಟ ಸರಿಯಾಗಿ ಆಗುತ್ತಿಲ್ಲ. ಅಂತಹವರು ಬಿಸಿನೀರು ಸೇವಿಸಿದರೆ ಆ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಸೈನಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗಿದೆ ಎಂದು ವೈದ್ಯರು ಹೇಳುತ್ತಾರೆ.

ನರಮಂಡಲದ ಮೇಲೆ ಪರಿಣಾಮ: ಬೆಚ್ಚಗಿನ ನೀರು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ನರಗಳ ಕೆಲಸವನ್ನು ವೇಗಗೊಳಿಸುತ್ತದೆ ಮತ್ತು ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ಎಂದು ತಜ್ಞರು ವಿವರಿಸುತ್ತಾರೆ.

ತ್ವಚೆಯಲ್ಲಿ ಸುಕ್ಕುಗಳು: ಬೆಳಗ್ಗೆ ಬಿಸಿ ನೀರಿನಿಂದ ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಇದನ್ನು ಡಿಟಾಕ್ಸಿಂಗ್ ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿದಾಗ ತ್ವಚೆ ಫ್ರೆಶ್ ಆಗುತ್ತದೆ. ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಬಿಸಿನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow