ಹೈವೇಯಲ್ಲಿ ಕಾರು ನಿಲ್ಲಿಸುತ್ತಿದ್ದೀರಾ? ಹುಷಾರ್.. ಹೆಣ್ಮಕ್ಕಳಿದ್ರೆ ಈ ತಪ್ಪು ಮಾಡ್ಬೇಡಿ!

ಜುಲೈ 1, 2025 - 22:07
 0  12
ಹೈವೇಯಲ್ಲಿ ಕಾರು ನಿಲ್ಲಿಸುತ್ತಿದ್ದೀರಾ? ಹುಷಾರ್.. ಹೆಣ್ಮಕ್ಕಳಿದ್ರೆ ಈ ತಪ್ಪು ಮಾಡ್ಬೇಡಿ!

ಪುಣೆ:- ಮಹಾರಾಷ್ಟ್ರದ ಪುಣೆಯ ದೌಂಡ್ ಜಿಲ್ಲೆಯಲ್ಲಿ ಕಾರು ಚಾಲಕ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿ ಹೋಗಿದ್ದಾಗ, ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಆಯುಧಗಳನ್ನು ತೋರಿಸಿ ಬೆದರಿಕೆ ಹಾಕಿದ್ದಷ್ಟೇ ಅಲ್ಲದೆ, 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಉಳಿದ ಮೂವರು ಮಹಿಳೆಯರಿಂದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಳಗಿನ ಜಾವ 4.15ರ ಸುಮಾರಿಗೆ ಹೆದ್ದಾಯ ಭಿಗ್ವಾನ್ ಬಳಿ ಚಾಲಕ ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದರು. ಕಾರಿನಬಲ್ಲಿ 7 ಜನರಿದ್ದರು. ಚಾಲಕ, ಮೂವರು ಮಹಿಳೆಯರು, 17 ವರ್ಷದ ಇಬ್ಬರು ಬಾಲಕರು ಹಾಗೂ ಬಾಲಕಿ ಇದ್ದರು. ಅವರು ಪುಣೆ ಜಿಲ್ಲೆಯ ಜುನ್ನಾರ್ ತಹಸಿಲ್‌ನ ಹಳ್ಳಿಯ ಎರಡು ವಿಭಿನ್ನ ಕುಟುಂಬಗಳಿಗೆ ಸೇರಿದವರಾಗಿದ್ದು, ಸೋಲಾಪುರ ಜಿಲ್ಲೆಯ ದೇವಾಲಯ ಪಟ್ಟಣವಾದ ಪಂಢರಪುರಕ್ಕೆ ಹೋಗುತ್ತಿದ್ದರು. 

ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನ ಬಳಿ ಬಂದು ಹರಿತವಾದ ಆಯುಧಗಳನ್ನು ತೋರಿಸಿ ಚಿನ್ನಾಭರಣಗಳನ್ನು ದೋಚಿದ್ದಾರೆ. ಹಾಗೆಯೇ 17 ವರ್ಷದ ಬಾಲಕಿಯನ್ನು ಕಾರಿನಿಂದ ಹೊರಗೆಳೆದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇದಾದ ನಂತರ ಇಬ್ಬರೂ ಪರಾರಿಯಾಗಿದ್ದಾರೆ. 

ಘಟನೆಯ ನಂತರ, ಕಾರು ಸವಾರರು ಧೈರ್ಯ ತಂದುಕೊಂಡು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow