ಗಂಡನೊಂದಿಗೆ ಫೋಟೋಗೆ ಫೋಸ್ ಕೊಟ್ಟ ಗಾಯಕಿ ಪೃಥ್ವಿ ಭಟ್! ರಾಘವೇಂದ್ರನ ದರ್ಶನ ಪಡೆದ ಜೋಡಿ!

ಎಪ್ರಿಲ್ 30, 2025 - 18:00
 0  36
ಗಂಡನೊಂದಿಗೆ ಫೋಟೋಗೆ ಫೋಸ್ ಕೊಟ್ಟ ಗಾಯಕಿ ಪೃಥ್ವಿ ಭಟ್! ರಾಘವೇಂದ್ರನ ದರ್ಶನ ಪಡೆದ ಜೋಡಿ!

ಮನೆಯವರನ್ನು ವಿರೋಧಿಸಿ ಮದುವೆಯಾಗಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಅವರು ಮೊದಲ ಬಾರಿಗೆ ಗಂಡನ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. 

ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿ ಅಭಿಷೇಕ್ ಜೊತೆಗಿನ ಫೋಟೋವನ್ನು ಗಾಯಕಿ ಪೃಥ್ವಿ ಹಂಚಿಕೊಂಡಿದ್ದಾರೆ. ಪತಿ ಜೊತೆ ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯಕ್ಕೆ ಗಾಯಕಿ ಭೇಟಿ ನೀಡಿದ್ದಾರೆ. ಈ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. 

ಗಾಯಕಿ ಪೃಥ್ವಿ ಭಟ್ ಅವರ ಪ್ರೇಮ ವಿವಾಹ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಗಾಯಕಿ ಪೃಥ್ವಿ ಪ್ರೇಮ ವಿವಾಹವನ್ನು ತಂದೆ ಶಿವಪ್ರಸಾದ್ ಧಿಕ್ಕರಿಸಿದ್ದರು. ಜೀ ವಾಹಿನಿಯಲ್ಲೇ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಮಗಳು ಪೃಥ್ವಿ ಮದುವೆಯಾಗಿದ್ದಕ್ಕೆ ಶಿವಪ್ರಸಾದ್ ಅಸಮಾಧಾನ ವ್ತಕ್ತಪಡಿಸಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow