ಅಶ್ಲೀಲ Videoಗಳ ರಹಸ್ಯ ಬಯಲು: ವಿಡಿಯೋವಲ್ಲಿರುವುದು ಪ್ರಜ್ವಲ್ ರೇವಣ್ಣನೇ ಎಂದು ಪತ್ತೆಹಚ್ಚಿದ್ಹೇಗೆ..?

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣವು ದೇಶದಾದ್ಯಾಂತ ಸದ್ದು ಮಾಡಿತ್ತು, 2024ರ ಲೋಕಸಭಾ ಚುನಾವಣೆಯ ವೇಳೆ ಅಶ್ಲೀಲ ವಿಡಿಯೋಗಳು ಭಾರೀ ವೈರಲ್ ಆಗಿದ್ದು, ಈ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯು ಪ್ರಜ್ವಲ್ ರೇವಣ್ಣ ಎನ್ನಲಾಗಿತ್ತು.
ವಿಡಿಯೋಗಳಲ್ಲಿ ಸ್ಪಷ್ಟವಾಗಿ ಮುಖ ಕಾಣಿಸದ ಕಾರಣ, ಆರೋಪಿಯ ಗುರುತನ್ನು ಖಚಿತಪಡಿಸುವುದು ತನಿಖೆಗೆ ಸವಾಲಾಗಿತ್ತು. ಆದರೆ, ಎಸ್ಐಟಿ ತಂಡವು ಇದನ್ನು ಸಮರ್ಥವಾಗಿ ಹತ್ತಿಕ್ಕಿ, ಟರ್ಕಿಯ Anatomical Comparison of Genital Features ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಯ ಗುರುತನ್ನು ದೃಢಪಡಿಸಿದೆ. ಈ ತಂತ್ರಜ್ಞಾನ ಬಳಸಿದ ಭಾರತದಲ್ಲಿ ಇದು ಮೊದಲ ಪ್ರಕರಣವಾಗಿದೆ.
ಎಸ್ಐಟಿ ಅಧಿಕಾರಿಗಳು ಈ ತಂತ್ರಜ್ಞಾನವನ್ನು ಉಪಯೋಗಿಸಿ ವಿಡಿಯೋದಲ್ಲಿರುವ ವ್ಯಕ್ತಿಯ ದೇಹದ ವೈಶಿಷ್ಟ್ಯಗಳನ್ನು ಪ್ರಜ್ವಲ್ ರೇವಣ್ಣರೊಂದಿಗೆ ಹೋಲಿಕೆ ಮಾಡಿದರು. ಈ ಪ್ರೌಢ ಪ್ರಮಾಣದಿಂದ ಪ್ರಕರಣಕ್ಕೆ ಮುಕ್ತಾಯ ದೊರಕಿದ್ದು, ನ್ಯಾಯಾಲಯವು ಜೀವಾವಧಿ ಶಿಕ್ಷೆ ಘೋಷಿಸಿದೆ.
2024ರಲ್ಲಿ ವೈರಲ್ ಆದ ಈ ವಿಡಿಯೋ ಪ್ರಕರಣದ ನಂತರ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಆರೋಪಿಗೆ ತಕ್ಷಣವೇ ಬಂಧನ ವಿಧಿಸಲಾಗಿದ್ದು, ಆತನ ವಿರುದ್ಧ ಸಾಕಷ್ಟು ಪ್ರಮಾಣಗಳು ಕಲೆ ಹಾಕಲಾಗಿತ್ತು. ಇದೀಗ ನ್ಯಾಯಾಲಯದ ತೀರ್ಪು ಆರೋಪಿಗೆ ತಕ್ಕ ಶಿಕ್ಷೆ ನೀಡಿದಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






