2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಅತ್ಯುತ್ತಮ ನಟ-ನಟಿಯಾಗಿ ಕಿಚ್ಚ ಸುದೀಪ್, ಅನುಪಮಾ ಗೌಡ ಆಯ್ಕೆ

ಜನವರಿ 22, 2025 - 18:00
 0  19
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಅತ್ಯುತ್ತಮ ನಟ-ನಟಿಯಾಗಿ ಕಿಚ್ಚ ಸುದೀಪ್, ಅನುಪಮಾ ಗೌಡ ಆಯ್ಕೆ

 

ಬೆಂಗಳೂರು: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ನಟ ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅತ್ಯುತ್ತಮ ನಟ ಹಾಗೂ ನಟಿ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಹಲವು ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿವೆ.

2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲು ಹಿರಿಯ ನಿರ್ದೇಶಕ, ನಿರ್ಮಾಪಕ ನಂಜುಂಡೇಗೌಡ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಟ್ಟು 180 ಚಲನಚಿತ್ರಗಳು ಅರ್ಜಿ ಸಲ್ಲಿಸಿದ್ದವು. ನಿಯಮಾನುಸಾರ ಇಲ್ಲದಿರುವ 8 ಚಲನಚಿತ್ರಗಳನ್ನು ಹೊರತುಪಡಿಸಿ, 172 ಚಲನಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಮಾಡಲಾಗಿದೆ.

2019 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಮೊದಲ ಅತ್ಯುತ್ತಮ ಚಿತ್ರ - ಮೋಹನದಾಸ

ಎರಡನೇ ಅತ್ಯತ್ತಮ ಚಿತ್ರ - ಲವ್‌ ಮಾಕ್‌ ಟೈಲ್‌

ಮೂರನೇ ಅತ್ಯುತ್ತಮ ಚಿತ್ರ - ಅರ್ಘ್ಯಂ

ವಿಶೇಷ ಕಾಳಜಿ ಚಿತ್ತ - ಕನ್ನೇರಿ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಇಂಡಿಯಾ V/S ಇಂಗ್ಲೆಂಡ್‌

ಅತ್ಯುತ್ತಮ ಮಕ್ಕಳ ಚಿತ್ರ - ಎಲ್ಲ ಆಡೋದು ನಾವು ಎಲ್ಲಿ ಆಡೋದು

ಅತ್ಯುತ್ತಮ ನಟ - ಶ್ರೀ ಕಿಚ್ಚ ಸುದೀಪ್‌ - ಚಿತ್ರ ಪೈಲ್ವಾನ್‌

ಅತ್ಯುತ್ತಮ ನಟಿ - ಕುಮಾರಿ ಅನುಪಮಾ ಗೌಡ - ಚಿತ್ರ ತ್ರಯಂಬಕಂ

ಅತ್ಯುತ್ತಮ ಪೋಷಕ ನಟ - ಶ್ರೀ ತಬಲ ನಾಣಿ - ಚಿತ್ರ ಕೆಮಿಸ್ಟ್ರಿ ಆಫ್‌ ಕರಿಯಪ್ಪ

ಅತ್ಯುತ್ತಮ ಪೋಷಕ ನಟಿ - ಕುಮಾರಿ ಅನೂಷ ಕೃಷ್ಣ - ಚಿತ್ರ ಬ್ರಾಹ್ಮಿ

ಅತ್ಯುತ್ತಮ ಸಂಗೀತ ನಿರ್ದೇಶಕ - ಶ್ರೀ ವಿ. ಹರಿಕೃಷ್ಣ - ಚಿತ್ರ ಯಜಮಾನ

ಅತ್ಯುತ್ತಮ ಹಿನ್ನೆಲೆ ಗಾಯಕ - ಶ್ರೀ ರಘು ದೀಕ್ಷಿತ್‌ - ಲವ್‌ ಮಾಕ್‌ ಟೈಲ್‌

ಅತ್ಯುತ್ತಮ ಹಿನ್ನೆಲೆ ಗಾಯಕಿ - ಡಾ. ಜಯದೇವಿ ಜಿಂಗಮ ಶೆಟ್ಟಿ - ಚಿತ್ರ ರಾಗಭೈರವಿ


ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow