ಕ್ರಿಕೆಟ್ ಗೆ ಮರಳುತ್ತಾರಾ ಎಬಿ ಡಿವಿಲಿಯರ್ಸ್!? ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಗುತ್ತಾ ABD!

ಜನವರಿ 23, 2025 - 09:26
 0  10
ಕ್ರಿಕೆಟ್ ಗೆ ಮರಳುತ್ತಾರಾ ಎಬಿ ಡಿವಿಲಿಯರ್ಸ್!? ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಗುತ್ತಾ ABD!

2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಎಬಿಡಿ ಇದೀಗ ಮತ್ತೆ ಕ್ರಿಕೆಟ್ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 

ಸಂದರ್ಶನದಲ್ಲಿ ಮಾತನಾಡಿದ ಅವರು, ಡಿವಿಲಿಯರ್ಸ್, ನಾನು ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳಬಹುದು. ಏಕೆಂದರೆ ನನ್ನ ಮಕ್ಕಳು ನಾನು ಆಡಬೇಕೆಂದು ಒತ್ತಡ ಹೇರುತ್ತಿರುತ್ತಾರೆ. ಅವರಿಗಾಗಿ ನಾನು ಮತ್ತೆ ಕ್ರಿಕೆಟ್ ಆಡಬೇಕೆಂದಿರುವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಎಬಿಡಿ ಡಿವಿಲಿಯರ್ಸ್ ಕಣ್ಣು ದೃಷ್ಟಿ ಸಮಸ್ಯೆಯ ಕಾರಣ ದಿಢೀರ್ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ಮಾತನಾಡಿದ ಎಬಿಡಿ, ನನ್ನ ಎಡಗಣ್ಣು ಸ್ವಲ್ಪ ಮಸುಕಾಗಿದ್ದರೂ, ಈಗ ಬಲಗಣ್ಣು ಪ್ರಬಲವಾಗಿದೆ. ಹೀಗಾಗಿ ಚೆಂಡನ್ನು ಚೆನ್ನಾಗಿ ಗುರುತಿಸಬಲ್ಲೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವುದಿಲ್ಲ ಎಂಬುದನ್ನು ಸಹ ಎಬಿ ಡಿವಿಲಿಯರ್ಸ್ ಖಚಿತಪಡಿಸಿದ್ದಾರೆ. ನಾನು ಮತ್ತೆ ಅಂಗಳಕ್ಕೆ ಇಳಿಯಲು ಇಚ್ಛಿಸಿದರೂ, ಐಪಿಎಲ್ ಅಥವಾ ಸೌತ್ ಆಫ್ರಿಕಾ ಟಿ20 ಲೀಗ್​ಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿಲ್ಲ. ಆದರೆ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ

ಎಬಿಡಿ ಅವರ ಈ ಹೇಳಿಕೆಯ ಬೆನ್ನಲ್ಲೇ ಅವರು ಮತ್ತೆ ಅಂಗಳಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow