ಮಹಿಳೆಗೆ ಬ್ಲ್ಯಾಕ್ ​ಮೇಲ್​ ಆರೋಪ: 'ಕೈ' ಶಾಸಕಿ ನಯನಾ ಮೋಟಮ್ಮ ಆಪ್ತ ಅರೆಸ್ಟ್​!

ಅಕ್ಟೋಬರ್ 29, 2025 - 18:08
 0  14
ಮಹಿಳೆಗೆ ಬ್ಲ್ಯಾಕ್ ​ಮೇಲ್​ ಆರೋಪ: 'ಕೈ' ಶಾಸಕಿ ನಯನಾ ಮೋಟಮ್ಮ ಆಪ್ತ ಅರೆಸ್ಟ್​!
ಚಿಕ್ಕಮಗಳೂರು: ಮಹಿಳೆಗೆ ಬ್ಲ್ಯಾಕ್​ಮೇಲ್​ ಮಾಡಿದ ಆರೋಪದಡಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ಆಪ್ತ ಆದಿತ್ಯ ನನ್ನು ಪೊಲೀಸರು ಬಂಧಿಸಿದ್ದಾರೆ. 
 
ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯು ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಮಹಿಳೆಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ದೂರಿದೆ. ಅಲ್ಲದೆ ಆ ವಿಡಿಯೋವನ್ನು ಸಂಬಂಧಿಕರು ಮತ್ತು ಪರಿಚಿತರಿಗೆ ಕಳುಹಿಸಿ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. 
 
ಈ ಕುರಿತು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಹಲ್ಲೆ ಕುರಿತು ಇನ್ನೂ ಯಾವುದೇ ದೂರು ಬಂದಿಲ್ಲ, ದೂರು ಬಂದರೆ ಆ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
 
ಬ್ಲ್ಯಾಕ್‌ಮೇಲ್ ಆರೋಪ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆದಿತ್ಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ಘಟನೆ ಕೂಡ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow