Krrish4: ಹೃತಿಕ್ ಜೊತೆ ಸೂಪರ್ ಹೀರೊ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ!?
'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಸದ್ಯ ಕೈತುಂಬಾ ಸಿನಿಮಾ ಅವಕಾಶಗಳನ್ನು ಇಟ್ಟುಕೊಂಡಿದ್ದಾರೆ. ಸಾಲು ಸಾಲು ಚಲನಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಬಾಲಿವುಡ್ ಸೂಪರ್‌ಹಿಟ್ ಫ್ರಾಂಚೈಸಿ ‘ಕ್ರಿಶ್ 4’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಕ್ರಿಶ್’ ಹಾಗೂ ‘ಕ್ರಿಶ್ 3’ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಆದರೆ ಈಗ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕಾರಣ, ಪ್ರಿಯಾಂಕಾ ಹಿಂದಿ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಕಡಿಮೆ. ಹೀಗಾಗಿ, ಚಿತ್ರತಂಡ ಹೊಸ ನಾಯಕಿ ಹುಡುಕಾಟದಲ್ಲಿದ್ದು, ಅವರ ಕಣ್ಣು ರಶ್ಮಿಕಾ ಮೇಲೆ ಬಿದ್ದಿದೆ.
ಚಿತ್ರದ ಹೀರೋ ಹೃತಿಕ್ ರೋಷನ್ ಆಗಿದ್ದು, ಇವರ ಜೊತೆಗೆ ರಶ್ಮಿಕಾ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹೊಸ ಜೋಡಿ ಕುರಿತು ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿದೆ. ರಶ್ಮಿಕಾ ಮಂದಣ್ಣ ಈಗಾಗಲೇ ‘ಪುಷ್ಪ’, ‘ಪುಷ್ಪ 2’, ‘ಅನಿಮಲ್’, ‘ಛಾವಾ’ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?