Amruthadhare Serial: ಕಳಚಿ ಬಿಳ್ತು ದಿಯಾ ಬೇಬಿ ಅಸಲಿ ಮುಖ! ಮಲ್ಲಿ-ಜಯದೇವ್ ಒಂದಾಗ್ತಾರಾ?

ಸೆಪ್ಟೆಂಬರ್ 21, 2025 - 21:08
 0  46
Amruthadhare Serial: ಕಳಚಿ ಬಿಳ್ತು ದಿಯಾ ಬೇಬಿ ಅಸಲಿ ಮುಖ! ಮಲ್ಲಿ-ಜಯದೇವ್ ಒಂದಾಗ್ತಾರಾ?

ಅಮೃತಧಾರೆ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಎದುರಾಗುತ್ತಿದೆ. ಜಯದೇವ್ ಮಲ್ಲಿಯನ್ನು ಬಿಟ್ಟು ದಿಯಾ ಜೊತೆ ಮದುವೆಯಾಗಿದ್ದು ಬಹಳ ಕಾಲವಾದರೂ, ಮಲ್ಲಿ ಇನ್ನೂ ಸಿಂಗಲ್‌ ಆಗಿಯೇ ಉಳಿದಿದ್ದಾಳೆ. ಐದು ವರ್ಷಗಳಿಂದ ಅವಳು ಭೂಮಿಕಾ ಜೊತೆ ವಾಸಿಸುತ್ತಿದ್ದು, ಈಗ ಐಎಎಸ್ ಪರೀಕ್ಷೆಗೆ ತಯಾರಾಗುತ್ತಿದ್ದಾಳೆ.

ಭೂಮಿಕಾ ಮಲ್ಲಿಗೆ ಇನ್ನೊಂದು ಮದುವೆ ಆಗಲಿ ಎಂದು ಒತ್ತಾಯಿಸುತ್ತಿದ್ದರೂ, ಮಲ್ಲಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ರಾಜೇಂದ್ರ ಭೂಪತಿ ಮಗಳಾದ ಮಲ್ಲಿಗೆ ಸಾಕಷ್ಟು ಆಸ್ತಿ ಇದ್ದರೂ, ಅವಳ ಜೀವನ ವೆಚ್ಚ, ಮನೆ ಬಾಡಿಗೆ, ದಿನನಿತ್ಯದ ಖರ್ಚು ಎಲ್ಲವನ್ನೂ ಭೂಮಿಕಾವೇ ನೋಡಿಕೊಳ್ಳುತ್ತಿದ್ದಾಳೆ.

ಇನ್ನೊಂದು ಕಡೆ ದಿಯಾ ಜಯದೇವ್ ಜೊತೆ ಇದ್ದರೂ, ಆಕೆಯ ನಿಜವಾದ ಉದ್ದೇಶ ಇನ್ನೂ ಬಯಲಾಗಿಲ್ಲ. ಜಯದೇವ್ನನ್ನು ಪ್ರೀತಿಸಿ ಮದುವೆಯಾಗದೇ, ಬೇರೆ ಕಾರಣಕ್ಕೆ ಈ ಮನೆಗೆ ಬಂದಿರುವ ದಿಯಾ, ತನ್ನ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲವೆಂದು ಒಳಗೊಳಗೆ ಬೇಸರಿಸುತ್ತಿದ್ದಾಳೆ.

ದಿಯಾ ಉದ್ದೇಶ ಬಯಲಾಗುವ ಕ್ಷಣದಲ್ಲೇ ಜಯದೇವ್ ಅವಳನ್ನು ಬಿಟ್ಟುಬಿಡುವ ಸಾಧ್ಯತೆ ಇದೆ. ಹೀಗಾಗಿ ಜಯದೇವ್ ಮಲ್ಲಿಯ ಕಡೆ ತಿರುಗುವ ಸಾಧ್ಯತೆಯೂ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಒಟ್ಟಿನಲ್ಲಿ, ಅಮೃತಧಾರೆ ಮುಂದಿನ ಎಪಿಸೋಡ್‌ಗಳಲ್ಲಿ ಪ್ರೇಕ್ಷಕರಿಗೆ ಭಾರಿ ಸಸ್ಪೆನ್ಸ್ ಹಾಗೂ ಟ್ವಿಸ್ಟ್ ನೀಡಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow