ಫೈಯರ್ ಬ್ರ್ಯಾಂಡ್ ಗೆ ಒಲಿದ ಲಕ್: ಬಂಪರ್ ಆಫರ್ ಗಿಟ್ಟಿಸಿಕೊಂಡ ಕುಂದಾಪುರ!

ಫೆಬ್ರವರಿ 1, 2025 - 19:43
 0  18
ಫೈಯರ್ ಬ್ರ್ಯಾಂಡ್ ಗೆ ಒಲಿದ ಲಕ್: ಬಂಪರ್ ಆಫರ್ ಗಿಟ್ಟಿಸಿಕೊಂಡ ಕುಂದಾಪುರ!

ಬಿಗ್ ಬಾಸ್ ಕನ್ನಡ 11’ ಮುಗಿಯುತ್ತಿದ್ದಂತೆ ಹೊಸ ರಿಯಾಲಿಟಿ ಶೋ ಒಂದನ್ನು ಕಲರ್ಸ್‌ ಕನ್ನಡ ಅನೌನ್ಸ್‌ ಮಾಡಿರೋದು ಗೊತ್ತೇ ಇದೆ. ಫೆಬ್ರವರಿ 1 ರಿಂದ ಹೊಸ ರಿಯಾಲಿಟಿ ಶೋ ಆರಂಭವಾಗ್ತಿದೆ. ಅದುವೇ ‘ಬಾಯ್ಸ್ ವರ್ಸಸ್ ಗರ್ಲ್ಸ್’. ಬಾಯ್ಸ್ ಮತ್ತು ಗರ್ಲ್ಸ್ ಮಧ್ಯೆ ಮಹಾಯುದ್ಧ ನಡೆಯುವ ಶೋ ಇದಾಗಿದೆ. ಈ ಶೋನಲ್ಲಿ ರಜತ್ ಕಿಶನ್‌, ಭವ್ಯಾ ಗೌಡ ಹಾಗೂ ಹನುಮಂತ ಕೂಡ ಇರಲಿದ್ದಾರೆ ಎನ್ನಲಾಗಿದೆ.

ಶೋನ ಹೊಸ ಪ್ರೋಮೋ ಔಟ್‌ ಆಗಿದ್ದು, ಏಕಾಏಕಿ ಚೈತ್ರಾ ಕುಂದಾಪುರ ಕಾಣಿಸಿಕೊಂಡಿದ್ದಾರೆ. ಹೌದು ಈ ರಿಯಾಲಿಟಿ ಶೋ ಆರಂಭದ ದಿನದಂದು ಚೈತ್ರಾ ಕುಂದಾಪುರ ಇದ್ದರು. ಹೀಗಾಗಿ ಇಲ್ಲಿ ಭಾಗವಾಹಿಸುತ್ತಿದ್ದಾರಾ? ಎಂಬ ಕುತೂಹಲ ಪ್ರೇಕ್ಷಕರಿಗೆ. ಆದರೆ ಈ ಶೋಗೆ ಅತಿಥಿಯಾಗಿ ಬಂದಿದ್ದಾರಾ? ಅಥವಾ ಸ್ಪರ್ಧಿಸಲು ಬಂದಿದ್ದಾರಾ? ಎಂದು ತಿಳಿದುಬಂದಿಲ್ಲ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸದಾಗಿ Boys v/s Girls ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ರಜತ್‌ ಜೊತೆಗೆ ಚೈತ್ರಾ ಕುಂದಾಪುರ ಕೂಡ ಸ್ಪರ್ಧಿಯಂತೆ. ಹೊರಗಡೆ ಸಮಾಜದಲ್ಲಿ ಭಾಷಣಗಳಲ್ಲಿ ಮುಳುಗಿ ಹೋಗಿದ್ದ ಚೈತ್ರಾ ʼಬಿಗ್‌ ಬಾಸ್ʼ‌ ಮನೆಗೆ ಬಂದಿದ್ದೇ ದೊಡ್ಡ ಅಚ್ಚರಿ. ಈಗ ಅವರು ಇನ್ನೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋಗೆ ಅನುಪಮಾ ಗೌಡ ಅವರು ನಿರೂಪಕಿ. ಎರಡು ತಂಡಗಳ ಮಧ್ಯೆ ಆಟ ನಡೆಯಲಿದೆ. ವಿನಯ್‌ ಗೌಡ, ಶುಭಾ ಪೂಂಜ ಅವರು ಈ ಟೀಂನ ಲೀಡರ್‌ಗಳು. ತಾರಾ, ಶ್ರುತಿ ಅವರು ನಿರ್ಣಾಯಕರು. ಈ ಶೋ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಇದೆ

ಧನರಾಜ್‌ ಆಚಾರ್‌, ಐಶ್ವರ್ಯಾ ಸಿಂಧೋಗಿ, ಐಶ್ವರ್ಯಾ ಸಾಲೀಮಠ, ಸ್ಫೂರ್ತಿ ಗೌಡ, ಚಂದನಾ ಗೌಡ, ನಿವೇದಿತಾ ಗೌಡ, ಕೋಳಿ ರಮ್ಯಾ, ಪ್ರಿಯಾ ಸವದಿ, ಸ್ನೇಹಿತ್‌ ಗೌಡ, ಸೂರಜ್‌, ಮಂಜು ಪಾವಗಡ ಮುಂತಾದವರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಅನುಪಮಾ ಗೌಡ ಅವರು ಚೈತ್ರಾ ಕುಂದಾಪುರ ಕೂಡ ಸ್ಪರ್ಧಿ ಅಂತ ಘೋಷಣೆ ಮಾಡಿದಕೂಡಲೇ ರಜತ್‌ ಅವರು “ಅಯ್ಯೋ ಏನ್‌ ಟ್ವಿಸ್ಟ್‌ ಗುರು!” ಎಂದು ಹೇಳಿದ್ದಾರೆ. ಆಗ ಅನುಪಮಾ ಗೌಡ ಅವರು “ಈಗ ಆಟ ಶುರು” ಎಂದು ಹೇಳಿದ್ದಾರೆ.

ʼಬಿಗ್‌ ಬಾಸ್ʼ‌ ಮನೆಯಲ್ಲಿ ಬಾಸ್‌, ಶಿಷ್ಯ ಅಂತೆಲ್ಲ ಹೇಳಿಕೊಂಡು ರಜತ್‌, ಚೈತ್ರಾ ಕುಂದಾಪುರ ಅವರು ಸಿಕ್ಕಾಪಟ್ಟೆ ಜಗಳ ಆಡಿದ್ದರು. ಈ ಜಗಳ ಮತ್ತೆ ಮುಂದುವರೆಯುವ ಹಾಗೆ ಕಾಣ್ತಿದೆ. ಈಗಾಗಲೇ ಹುಡುಗ, ಹುಡುಗಿ ಎಂದು ಎರಡು ತಂಡಗಳು ಸೃಷ್ಟಿ ಆಗಿದ್ದು, ಕೆಲ ರಿಯಾಲಿಟಿ ಶೋ ಬಂದಿದೆ. ಈಗ ಈ ರಿಯಾಲಿಟಿ ಶೋ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಕಾಡ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow