ನಾಲಿಗೆಯ ಬಣ್ಣವೇ ದೇಹದ ಆರೋಗ್ಯದ ಸೂಚನೆ! ನೀವು ಹೀಗೆ ತಿಳಿಯಬಹುದು

ಸೆಪ್ಟೆಂಬರ್ 22, 2025 - 07:01
ಸೆಪ್ಟೆಂಬರ್ 20, 2025 - 16:23
 0  20
ನಾಲಿಗೆಯ ಬಣ್ಣವೇ ದೇಹದ ಆರೋಗ್ಯದ ಸೂಚನೆ! ನೀವು ಹೀಗೆ ತಿಳಿಯಬಹುದು

ಆಹಾರ ಉತ್ತಮವಾಗಿ ಜೀರ್ಣವಾದರೆ ಮಾತ್ರ ದೇಹಕ್ಕೆ ಸರಿಯಾದ ಶಕ್ತಿ ದೊರೆಯುತ್ತದೆ. ದೇಹದ ಎಲ್ಲಾ ಅಂಗಗಳೂ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಲು, ಮೂರು ದೋಷಗಳ ಸಮತೋಲದಲ್ಲಿರುವ ಆಹಾರ ಜೀರ್ಣವಾಗುವಿಕೆ ಸರಿಯಾಗಿರಬೇಕು.

ಇಲ್ಲವಾದರೆ ಶಕ್ತಿಯ ಕೊರತೆ, ಆಸಿಡಿಟಿ, ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ ಸೇರಿದಂತೆ ಇನ್ನು ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಫೈಬರ್‌ ಅಂಶವಿರುವ ಆಹಾರವನ್ನು ಸೇವಿಸುವ ಮೂಲಕ ಜೀರ್ಣಶಕ್ತಿಯನ್ನು ಉತ್ತಮವಾಗಿಸಿಕೊಳ್ಳಬೇಕು ಎಂದು ಹೇಳುವುದು.

ನಮ್ಮ ನಾಲಿಗೆ ನಮ್ಮ ದೇಹದ ಆಂತರಿಕ ಆರೋಗ್ಯವನ್ನು ಅದರ ಬಣ್ಣ, ನೋಟ, ವಿನ್ಯಾಸ ಮತ್ತು ಅದು ತಿಳಿಸುವ ಸಂವೇದನೆಯ ಮೇಲೆ ಪ್ರಕಟಪಡಿಸುತ್ತದೆ. ನಿಮ್ಮ ಆಂತರಿಕ ಆರೋಗ್ಯದ ಕುರಿತು ನಾಲಿಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.

ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಲ್ಲಿದ್ದು  ಸಣ್ಣಗಂಟುಗಳಿಂದ ಕೂಡಿರಬೇಕು ಎಂದಾಗಿದೆ. ನಿಮ್ಮ ನಾಲಿಗೆ ಸಾಮಾನ್ಯವಾಗಿ ಗೋಚರಿಸುವುದಕ್ಕಿಂತ ಪ್ರತ್ಯೇಕವಾಗಿ ಕಂಡರೆ ಅಥವಾ ನಾಲಿಗೆಯಲ್ಲಿ ಯಾವುದೇ ನೋವು ಕಂಡುಬಂದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಈ ಕುರಿತು ವಿಷದವಾಗಿ ಅರಿತುಕೊಳ್ಳೋಣ

ಬಿಳಿ ಬಣ್ಣದ ಲೇಪನ ಅಥವಾ ನಾಲಿಗೆಯ ಮೇಲೆ ಬಿಳಿ ಚುಕ್ಕೆಗಳು ಯೀಸ್ಟ್ ಸೋಂಕಾಗಿರುವ ಬಾಯಿಯೊಳಗೆ ನಿರ್ಮಾಣವಾಗುವ ಲ್ಯುಕೋಪ್ಲಾಕಿಯಾ ಕೋಶಗಳ ಸೂಚನೆಯಾಗಿರಬಹುದು. ಬಾಯಿಯಲ್ಲಿ ಈ ಕೋಶಗಳ ಬೆಳವಣಿಗೆ ಹೆಚ್ಚಿರುತ್ತದೆ. ನಾಲಿಗೆಯ ಮೇಲೆ ಬಿಳಿ ಬಣ್ಣದ ಗೆರೆಗಳು ಉಂಟಾಗುವುದು ಈ ಕೋಶಗಳ ರಚನೆಯಿಂದಾಗಿ. ಬಾಯಿಯ ಸೋಂಕು ಹೆಚ್ಚಾಗಿ ಶಿಶುಗಳಲ್ಲಿ ಹಾಗೂ ವಯಸ್ಸಾದವರಲ್ಲಿ ಕಂಡುಬರುತ್ತದೆ.

ಕೃತಕ ದಂತ ಅಳವಡಿಸಿಕೊಂಡವರು ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ಈ ಸೋಂಕು ತೀವ್ರವಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಸೇವಿಸುವವರಲ್ಲಿ ಬಾಯಿಯ ಸೋಂಕು ಅತಿಯಾಗಿರುತ್ತದೆ. ಕ್ಯಾನ್ಸರ್ ಪೂರ್ವ ಸೂಚಕವಾಗಿ ಕೂಡ ಈ ಸೋಂಕು ಕಂಡುಬರುವ ಸಾಧ್ಯತೆ ಇರುತ್ತದೆ. 

ನಾಲಿಗೆಯು ಕಡುಗೆಂಪು ಬಣ್ಣಕ್ಕೆ ಮಾರ್ಪಟ್ಟಿದ್ದರೆ ವಿಟಮಿನ್ ಕೊರತೆಯ ಸಂಕೇತ ಎಂಬುದಾಗಿ ಬಣ್ಣಿಸಬಹುದಾಗಿದೆ. ಇದರಿಂದ ನಾಲಿಗೆಯ ಮೇಲೆ ಕೆಂಪು ಕಲೆಗಳ ನಕ್ಷೆಗಳಂತಹ ಮಾದರಿ ರೂಪುಗೊಳ್ಳುತ್ತದೆ. ಸ್ಕಾರ್ಲೆಟ್ ಜ್ವರದ ಲಕ್ಷಣದಿಂದ ಕೂಡ ನಾಲಿಗೆ ಕೆಂಪಾಗಿ ಮಾರ್ಪಡುತ್ತದೆ. ವಿಟಮಿನ್ ಕೊರತೆಯಿಂದ ಉಂಟಾಗುವ ಕವಾಸಕಿ ಕಾಯಿಲೆಗೂ ಕೆಂಪು ವರ್ಣ ಕಾರಣವಾಗಿದೆ

ಇದನ್ನು ಸರಳ ರಕ್ತಪರೀಕ್ಷೆಯ ಮೂಲಕ ಪತ್ತೆಹಚ್ಚಬಹುದು ಎಂದು ಅಲನ್ ಹೇಳುತ್ತಾರೆ. ನಾಲಿಗೆಯ ಮೇಲೆ ಕಂಡುಬರುವ ತೇಪೆಗಳ ಸುತ್ತ ಬಿಳಿ ಅಂಚನ್ನು ಒಳಗೊಂಡಿದ್ದು ಒಮ್ಮೊಮ್ಮೆ ಇವು ಸ್ಥಳ ಬದಲಾಯಿಸುತ್ತವೆ. ನಾಲಿಗೆ ಕೆಂಪು ವರ್ಣದಲ್ಲಿದ್ದು ಜ್ವರದ ಅನುಭವವಾಗುತ್ತಿದ್ದರೆ ವೈದ್ಯರನ್ನು ಕಾಣಬೇಕು. 

ನಿಮ್ಮ ನಾಲಿಗೆ ಗಡುಸಾಗಿದ್ದು ನೋವಿನ ಅನುಭವ ಉಂಟು ಮಾಡುತ್ತಿದ್ದರೆ ಒಮ್ಮೊಮ್ಮೆ ನೀವಾಗಿಯೇ ಹಲ್ಲುಗಳಿಂದ ಕಚ್ಚಿಕೊಂಡಿದ್ದರ ಪರಿಣಾಮವಾಗಿರಬಹುದು. ಇಲ್ಲದಿದ್ದರೆ ಅತಿಯಾದ ಧೂಮಪಾನದಿಂದ ಉಂಟಾದ ನೋವಾಗಿರುತ್ತದೆ. ಒತ್ತಡ ಹಾಗೂ ಇತರ ಅಂಶಗಳಿಂದ ಉತ್ಪಾದನೆಯಾಗುವ ಬಾಯಿ ಹುಣ್ಣು 2 ವಾರಗಳಲ್ಲಿ ಚಿಕಿತ್ಸೆ ಇಲ್ಲದೆಯೇ ಗುಣವಾಗುತ್ತದೆ. ಒಮ್ಮೊಮ್ಮೆ 2 ವಾರಗಳಲ್ಲಿ ಗುಣವಾಗದೇ ನಾಲಿಗೆಯ ಮೇಲೆ ಗಡ್ಡೆ ಅಥವಾ ಹುಣ್ಣು ಹಾಗೆಯೇ ಇದ್ದಲ್ಲಿ ಇದು ಕ್ಯಾನ್ಸರ್ ಲಕ್ಷಣಗಳಾಗಿರಬಹುದು. ಹೆಚ್ಚಿನ ಬಾಯಿಯ ಕ್ಯಾನ್ಸರ್ ಯಾವುದೇ ನೋವಿನ ಅನುಭವ ಹಾಗೂ ರೋಗ ಲಕ್ಷಣಗಳನ್ನುಂಟು ಮಾಡುವುದಿಲ್ಲ

ಕೂದಲಿನ ರೀತಿಯಲ್ಲೇ ನಿಮ್ಮ ನಾಲಿಗೆಯ ಮೇಲೆ ಗುಳ್ಳೆಗಳು ಬೆಳೆಯುತ್ತವೆ. ಇದು ನಿಮ್ಮ ಜೀವಿತಾವಧಿಯವರೆಗೆ ಕಂಡುಬರುತ್ತದೆ. ಇನ್ನು ಕೆಲವರಲ್ಲಿ ಈ ಗುಳ್ಳೆಗಳು ಉದ್ದ ಕೂದಲಿನಿಂದ ಕೂಡಿರುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ನೆಲೆಗೊಳ್ಳುವ ಸಾಧ್ಯತೆ ಇರುತ್ತದೆ. ನಾಲಿಗೆಯ ಮೇಲೆ ಹೆಚ್ಚಾದ ಗುಳ್ಳೆಗಳು ಕೂದಲಿನ ರಚನೆಯಂತೆ ಕಂಡುಬರುತ್ತವೆ.

ಇದು ಗಂಭೀರ ಹಾಗೂ ಚಿಂತಾಜನಕ ಸ್ಥಿತಿಯಲ್ಲದಿದ್ದರೂ ಮೌಖಿಕ ನೈರ್ಮಲ್ಯದಿಂದ ಗುಣಪಡಿಸಬಹುದಾಗಿದೆ. ಅಲನ್ ಹೇಳುವಂತೆ ಮಧುಮೇಹ ರೋಗಿಗಳು, ಆ್ಯಂಟಿಬಯೋಟಿಕ್ ಸೇವಿಸುವವರು ಅಥವಾ ಕೀಮೋಥೆರಪಿ ಚಿಕಿತ್ಸೆಗೆ ಒಳಗಾದವರಲ್ಲಿ ಈ ರೀತಿಯ ಕೂದಲ ಬೆಳವಣಿಗೆ ಕಂಡುಬರುತ್ತದೆ. ಈ ಸಮಯದಲ್ಲಿ ಶೀಘ್ರ ಆರೈಕೆ ಹಾಗೂ ವೈದ್ಯಕೀಯ ಸಲಹೆ ಅನುಸರಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow