Never Bath After Eating: ಊಟ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ ಅಪಾಯವೇ? ಈ ಸ್ಟೋರಿ ನೋಡಿ

ಜೂನ್ 10, 2025 - 07:00
 0  10
Never Bath After Eating: ಊಟ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ ಅಪಾಯವೇ? ಈ ಸ್ಟೋರಿ ನೋಡಿ

ಇತ್ತೀಚೆಗೆ ಸಮಯದ ಅಭಾವದಿಂದ ಕೆಲವರು ಯಾವಾಗ ಬೇಕೆಂದರೆ ಆಗ ಸ್ನಾನ ಮಾಡುತ್ತಾರೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿದರೆ, ಇನ್ನೂ ಕೆಲವರು ಸಂಜೆ ಸಮಯದಲ್ಲಿ ಸ್ನಾನ ಮಾಡುತ್ತಾರೆ. 2 ಬಾರಿ ಸ್ನಾನ ಮಾಡುವವರು ಕೂಡ ಇದ್ದಾರೆ. ಊಟ ಮಾಡಿದ ತಕ್ಷಣ ನೇರವಾಗಿ ಸ್ನಾನಕ್ಕೆ ಹೋಗುತಿದ್ದೀರಾ? ಇವತ್ತಿನಿಂದ ಆ ರೂಡಿಯನ್ನು ಬದಲಾಯಿಸಿಕೊಳ್ಳಿ. ಊಟ ಆದ ತಕ್ಷಣ ಸ್ನಾನ ಮಾಡಿದ್ರೆ ಒಳ್ಳೆಯದಲ್ಲ. ಏಕೆಂದರೆ ಆ ರೀತಿ ಸ್ನಾನ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ನಿಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು.

ಊಟ ಮಾಡಿದ ತಕ್ಷಣವೇ ಯಾಕೆ ಸ್ನಾನ ಮಾಡಬಾರದು?
ಊಟ ಮಾಡದ ತಕ್ಷಣವೇ ಸ್ನಾನ ಮಾಡುವುದು ತುಂಬಾ ಕೆಟ್ಟ ಅಭ್ಯಾಸ. ಯಾಕೆಂದರೆ ಇದು ರಕ್ತ ಸಂಚಾರವನ್ನು ಕಡಿಮೆ ಮಾಡುವುದು. ರಕ್ತ ಸಂಚಾರವು ಕಡಿಮೆ ಆದರೆ ಆಗ ದೇಹದಲ್ಲಿ ತಿಂದ ಆಹಾರವು ಜೀರ್ಣವಾಗಲು ತುಂಬಾ ಸಮಯ ಬೇಕಾಗುವುದು. ನಿಮ್ಮ ಆಹಾರವು ಜೀರ್ಣಕ್ರಿಯೆಯು ನಿಧಾನವಾದರೆ ಆಗ ಕರುಳು ಭಾರವಾಗುವುದು ಮತ್ತು ನೀವು ತುಂಬಾ ಬಳಲಿದಂತೆ, ಆಯಾಸ ಮತ್ತು ಮಲಬದ್ಧತೆಯು ಕಾಡುವುದು.


ಆಯುರ್ವೇದವು ಏನು ಹೇಳುತ್ತದೆ?
ಆಯುರ್ವೇದವು ಹೇಳುವ ಪ್ರಕಾರ ಊಟ ಬಳಿಕ ಜೀರ್ಣಕ್ರಿಯೆಗೆ ದೇಹದಲ್ಲಿನ ಅಗ್ನಿಯ ಅಂಶವು ಕಾರಣವಾಗಿರುವುದು. ಊಟವಾದ ತಕ್ಷಣವೇ ನೀವು ಸ್ನಾನ ಮಾಡಿದರೆ ಆಗ ಜೀರ್ಣಕ್ರಿಯೆಗೆ ಬಳಸಲ್ಪಡುತ್ತಿದ್ದ ಶಕ್ತಿ ಅಥವಾ ಅಗ್ನಿಯು ಚರ್ಮದ ಕಡೆಗೆ ಸಾಗಿ ಅಲ್ಲಿ ದೇಹದ ತಾಪಮಾನವನ್ನು ಸಮತೋಲನದಲ್ಲಿ ಇಡಲು ಪ್ರಯತ್ನಿಸುವುದು. ಇದರಿಂದ ಊಟವಾದ ಎರಡು ಗಂಟೆಗಳ ಕಾಲ ಸ್ನಾನ ಮಾಡಬಾರದು ಎಂದು ಪುರಾತನ ಚಿಕಿತ್ಸಾ ಪದ್ಧತಿಯು ಹೇಳುತ್ತದೆ. ದೇಹದ ನೈಸರ್ಗಿಕ ಕ್ರಿಯೆಗೆ ತೊಂದರೆ ಉಂಟು ಮಾಡಿದರೆ ಅಥವಾ ಅದಕ್ಕೆ ತದ್ವಿರುದ್ಧವಾಗಿ ವರ್ತಿಸಿದರೆ ಆಗ ಅನಾರೋಗ್ಯ, ಅಸಮಾಧಾನ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ವಿಜ್ಞಾನವೂ ಈ ವಾದವನ್ನು ಒಪ್ಪಿಕೊಂಡಿದೆ
ಆಯುರ್ವೇದದ ವಾದವನ್ನು ಆಧುನಿಕ ವಿಜ್ಞಾನವು ಬೆಂಬಲಿಸಿದೆ. ಊಟ ಮಾಡುವ ವೇಳೆ ರಕ್ತ ಸಂಚಾರವು ಹೆಚ್ಚಾಗುವುದು. ಇದು ಜೀರ್ಣಕ್ರಿಯೆ ವ್ಯವಸ್ಥೆಯತ್ತ ಮತ್ತು ಇತರ ಕೆಲವು ಅಂಗಾಂಗಗಳಿಗೆ ಹೋಗುವುದು. ಊಟವಾದ ತಕ್ಷಣವೇ ನೀವು ಸ್ನಾನ ಮಾಡಿದರೆ ಆಗ ದೇಹದಲ್ಲಿನ ನೈಸರ್ಗಿಕ ಕ್ರಿಯೆಗೆ ಪರಿಣಾಮವಾಗುವುದು ಮತ್ತು ದೇಹವು ಹೊರಗಿನಿಂದ ತಂಪಾಗುವ ಕಾರಣದಿಂದಾಗಿ ಹೆಚ್ಚಿನ ಶಕ್ತಿ ವ್ಯಯಿಸಿ ಉಷ್ಣತೆ ಕಾಪಾಡಿ ಕೊಳ್ಳಬೇಕಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಬಳಸಲ್ಪಡುತ್ತಿದ್ದ ಶಕ್ತಿಯು ಈಗ ಚರ್ಮದ ಕಡೆಗೆ ಹೋಗಿ ಅಲ್ಲಿ ತಾಪಮಾನ ಕಾಪಾಡಲು ಪ್ರಯತ್ನಿಸುವುದು. ಇದರಿಂದಾಗಿ ಜೀರ್ಣಕ್ರಿಯೆಯು ನಿಧಾನವಾಗುವುದು ಮತ್ತು ಅಸ್ವಸ್ಥತೆ ಕಾಡುವುದು.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow