HMPV Virus: ಟೆನ್ಶನ್ ಹೆಚ್ಚಿಸಿದ HMPV: ಒಂದೇ ದಿನದಲ್ಲಿ ಐವರು ಮಕ್ಕಳಲ್ಲಿ ಸೋಂಕು ಮತ್ತೆ..!

ಜನವರಿ 7, 2025 - 18:05
 0  13
HMPV Virus: ಟೆನ್ಶನ್ ಹೆಚ್ಚಿಸಿದ HMPV: ಒಂದೇ ದಿನದಲ್ಲಿ ಐವರು ಮಕ್ಕಳಲ್ಲಿ ಸೋಂಕು ಮತ್ತೆ..!

ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ನಡುವೆ ನಿನ್ನೆ ಬೆಂಗಳೂರಿಗೂ ವೈರಸ್ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ ನಿನ್ನೆ ಇಬ್ಬರು ಮಕ್ಕಳಲ್ಲಿ HMPV ವೈರಸ್ ಪತ್ತೆಯಾದ ಬೆನ್ನಲ್ಲೇ ಮಲೆನಾಡು ಶಿವಮೊಗ್ಗದಲ್ಲೂ ಎಚ್‌ಎಂಪಿವಿ ಬಗ್ಗೆ ಗೊತ್ತಾಗಿದೆ. ಚೀನಾದಲ್ಲಿ ಆತಂಕ ಮೂಡಿಸುತ್ತಿರುವ  ವೈರಸ್ ಶಿವಮೊಗ್ಗದಲ್ಲೂ ಪತ್ತೆಯಾಗಿದೆ.

ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಐವರು ಮಕ್ಕಳಲ್ಲಿ  ಹೆಚ್ಎಂಪಿ ವೈರಸ್ ಸೋಂಕು ಕಂಡುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಮಕ್ಕಳಲ್ಲಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು  ಎಂದು ಮಾಹಿತಿ ನೀಡಿದ್ದಾರೆ.

ಕೊರೋನಾ ಶಂಕೆಯಲ್ಲಿ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳನ್ನು ಗುಣಪಡಿಸಲಾಗಿದೆ ಎಂದು ಡಾ.  ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರ. ಅಕ್ಟೋಬರ್ ನವೆಂಬರ್ ತಿಂಗಳಿನಿಂದಲೇ ಸೋಂಕು ಆರಂಭಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.  2 ವರ್ಷ, 11 ತಿಂಗಳು, 4 ವರ್ಷ , 1  ವರ್ಷ, 6 ತಿಂಗಳ ಒಟ್ಟು ಐದು ಮಕ್ಕಳಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow