Bigg Boss11; ಟಾಸ್ಕ್ ನಲ್ಲಿ ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್!? ಹೇಗಿದೆ ಗೊತ್ತಾ ದೊಡ್ಮನೆ ಆಟ!

ಜನವರಿ 7, 2025 - 20:00
 0  13
Bigg Boss11; ಟಾಸ್ಕ್ ನಲ್ಲಿ ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್!? ಹೇಗಿದೆ ಗೊತ್ತಾ ದೊಡ್ಮನೆ ಆಟ!

ಬಿಗ್ ಬಾಸ್‌' ಕನ್ನಡ ಸೀಸನ್ 11 ಆರಂಭವಾಗಿ 50 ದಿನಗಳು ಕಳೆದಿದ್ದವು. ಆಗ ಮನೆಯೊಳಗೆ ದೊಡ್ಡ ದೊಡ್ಡ ಯುದ್ಧಗಳೇ ನಡೆದುಹೋಗಿದ್ದವು. ಆಗ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಬಂದವರೇ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್. ಆದರೆ ಶೋಭಾ ಒಂದೇ ಬಂದಷ್ಟೇ ವೇಗದಲ್ಲಿ ವಾಪಸ್ ಹೋದರು. ಆದರೆ ರಜತ್, ಆಗಲೇ ಮನೆಯೊಳಗೆ 50 ದಿನ ಪೂರೈಸಿ, ಫಿನಾಲೆ ಕದ ತಟ್ಟೋಕೆ ರೆಡಿಯಾಗಿದ್ದಾರೆ.

ಇನ್ನೂ ಮತ್ತೊಂದೆಡೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದ್ದು ಸ್ಪರ್ಧಿಗಳಿಗೆ ಒತ್ತಡ ಹೆಚ್ಚಾಗಿದೆ. ಇದರ ಜೊತೆ ಟಾಸ್ಕ್​ಗಳಲ್ಲೂ ಗೆಲುವು ಪಡೆಯಬೇಕಾಗಿದೆ. 

ಮನೆಯಲ್ಲಿನ ಸದಸ್ಯರಿಗೆ ಇಂದು ನೀಡಿರುವ ಟಾಸ್ಕ್​ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದೆ ಹೆಚ್ಚು ಕಾಣುತ್ತದೆ. ಟಾಸ್ಕ್​ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಟ್ಟಿರುತ್ತಾರೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್​ನಿಂದ ಹೊಡೆದು ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಒಂದು ವೇಳೆ ಬಾಟಲ್ ಕೆಳಗೆ ಬಿದ್ದರೂ ಸ್ಪರ್ಧಿ ಸೋತಾಗೆ.

ಸದ್ಯ ಈ ರೀತಿಯ ಗೇಮ್ ಆಡುವಾಗ ತ್ರಿವಿಕ್ರಮ್ ಮುಖ, ಮುಖಕ್ಕೆ ಮಂಜು ಪೋಲ್​ನಿಂದ ಹೊಡೆದರು. ಹೆಂಗೆ ಬಿತ್ತು, ಹೇಗೆ ಬಿತ್ತು ಎಂದು ಹೇಳಿದರೆ, ಹೀಗೆ ಹೊಡೆದರೆ ಹೆಂಗೆ?. ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್​ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್​ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ಆದರೆ ಮಂಜು ಕೈಯಿಂದ ಬಾಟಲ್ ಕೆಳಗೆ ಬಿದ್ದಿಲ್ಲ. ಆಡುವಾಗ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ ಎನ್ನಲಾಗಿದೆ. ಆದರೆ ಈ ಟಾಸ್ಕ್​ನಲ್ಲಿ ಯಾರು ಗೆದ್ದಿದಾರೆ ಎನ್ನುವುದು ಕುತೂಹಲ ವಿದೆ.

ಇನ್ನು ತ್ರಿವಿಕ್ರಮ್ ಹಾಗೂ ಮಂಜು ನಡುವೆ ಮಾತಿನ ಸಮರ ನಡೆದಿದ್ದು ಟಾಸ್ಕ್​ನಲ್ಲೂ ಇಬ್ಬರು ಕೋಪದಲ್ಲೇ ಆಡಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ. ಬಿಗ್​ಬಾಸ್ ಪ್ರಕಾರ ಯಾರು ಟಾಸ್ಕ್​ ಚೆನ್ನಾಗಿ ಪೂರ್ಣಗೊಳಿಸಿ ಗೆಲವು ಪಡೆಯುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow