Junior Movie: ‘ಜೂನಿಯರ್’ ಸಿನಿಮಾ ಬಿಡುಗಡೆ: ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..??

ಮಾಜಿ ಸಚಿವ ಹಾಗೂ ಉದ್ಯಮಿ ಜನಾರ್ಧನ್ ರೆಡ್ಡಿಯವರ ಪುತ್ರ ಕಿರೀಟಿ ಅವರು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಜೂನಿಯರ್’ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರವು ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಜುಲೈ 18ರಂದು ತೆರೆಕಂಡಿದ್ದು, ಮೊದಲ ದಿನವೇ ಸುಮಾರು ₹1.40 ಕೋಟಿ ರೂ. ಗಳಿಕೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಕಿರೀಟಿ ಅಭಿನಯದ ಈ ಚಿತ್ರಕ್ಕೆ ಕನ್ನಡ ಹಾಗೂ ತೆಲುಗು ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಲಭಿಸಿದ್ದು, ಅದರ ಪರಿಣಾಮವಾಗಿ ಮೊದಲ ದಿನವೇ ಈ ಮಟ್ಟದ ಕಲೆಕ್ಷನ್ ಸಾಧ್ಯವಾಗಿದೆ. ಚಿತ್ರದಲ್ಲಿ ಕಿರೀಟಿ ಜೊತೆಗೆ ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಹಾಗೂ ಇತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರವು ದೊಡ್ಡ ತಾರಾಬಳಗ ಹಾಗೂ ಹೆಚ್ಚು ಬಜೆಟ್ನಲ್ಲಿ ನಿರ್ಮಾಣವಾಗಿದ್ದು, ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರಣದಿಂದಾಗಿ ಮೊದಲ ದಿನದ ₹1.40 ಕೋಟಿ ಗಳಿಕೆಯನ್ನು ಸಮಾಧಾನಕರ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ. ಆದರೆ, ಪ್ಯಾನ್-ಇಂಡಿಯಾ ಅಂತರದಿಂದ ನೋಡಿದರೆ, ಇನ್ನಷ್ಟು ಹೆಚ್ಚಿನ ಕಲೆಕ್ಷನ್ ನಿರೀಕ್ಷಿತವಾಗಿತ್ತು ಎಂಬ ಮಾತುಗಳು ನಡೆಯುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






