Mohammed Siraj: ಚಾಂಪಿಯನ್ಸ್ ಟ್ರೋಫಿಯಿಂದ ಹೊರಗಿಟ್ಟ ಬಗ್ಗೆ ಮೊಹಮ್ಮದ್ ಸಿರಾಜ್ ಹೇಳಿದ್ದೇನು..?

ರೋಹಿತ್ ಭಾಯ್ ಯಾವಾಗಲೂ ತಂಡಕ್ಕೆ ಅತ್ಯುತ್ತಮವಾದ ನಿರ್ಧಾರವನ್ನೇ ಮಾಡುತ್ತಾರೆ ಎಂದು ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಬಗ್ಗೆ ಮಾತನಾಡಿದ ಅವರು, ದೇಶದ ಪರವಾಗಿ ಆಡುವಾಗ ಆಟಗಾರನೊಬ್ಬನ ಆತ್ಮವಿಶ್ವಾಸ ತುಂಬಾ ಹೆಚ್ಚಾಗುತ್ತದೆ ಹಾಗೂ
ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಐಸಿಸಿ ಇವೆಂಟ್ನಲ್ಲಿ ಆಡುವುದು ಆಟಗಾರನ ಬಯಕೆಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ನನ್ನನ್ನು ಪಂದ್ಯಾವಳಿಯಿಂದ ಕೈಬಿಟ್ಟಿದ್ದು ಏಕೆ ಎಂಬುದು ಗೊತ್ತಿರಲಿಲ್ಲ, ಆದರೆ, ರೋಹಿತ್ ಭಾಯ್ ಯಾವಾಗಲೂ ತಂಡಕ್ಕೆ ಅತ್ಯುತ್ತಮವಾದ ನಿರ್ಧಾರವನ್ನೇ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ಅವರು 2023ರ ವನ್ ಡೇ ವಿಶ್ವಕಪ್ ಮತ್ತು 2024ರ ಟಿ 20 ವಿಶ್ವಕಪ್ ತಂಡದ ಭಾಗವಾಗಿದ್ದರು. ಆದರೆ 2025 ಚಾಂಪಿಯನ್ಸ್ ಟ್ರೋಫಿಯಿಂದ ಅವರನ್ನು ಹೊರಗಿಡಲಾಗಿತ್ತು ಹಾಗೂ ಅವರನ್ನು ನಾನ್ ಟ್ರಾವೆಲಿಂಗ್ ರಿಸರ್ವ್ ಆಟಗಾರನ್ನಾಗಿ ಘೋಷಿಸಲಾಗಿತ್ತು. ಟ್ರೋಫಿಯನ್ನು ಭಾರತ ಗೆದ್ದ ಕಾರಣ ತಂಡಕ್ಕೆ ಅವರ ಅಗತ್ಯತೆ ಬೀಳಲಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






