Ramadan 2025: ಪವಿತ್ರ ರಂಜಾನ್ ಹಬ್ಬದ ಆಚರಣೆ ಹೇಗೆ ಮತ್ತು ಯಾಕೆ..? ಇಲ್ಲಿದೆ ಮಾಹಿತಿ

ಮಾರ್ಚ್ 31, 2025 - 08:27
 0  10
Ramadan 2025: ಪವಿತ್ರ ರಂಜಾನ್ ಹಬ್ಬದ ಆಚರಣೆ ಹೇಗೆ ಮತ್ತು ಯಾಕೆ..? ಇಲ್ಲಿದೆ ಮಾಹಿತಿ

ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದಾಗಿದೆ. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಈ ದಿನದಂದು ದೇವರಿಂದ ಜನರಿಗೆ ಬಹಿರಂಗವಾಯಿತು ಎಂಬ ನಂಬಿಕೆ ಜನರಲ್ಲಿದೆ.

ಇತಿಹಾಸ ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗಪಡಿಸಿದರು ಎಂದು ನಂಬಲಾಗಿದೆ. ಈದ್ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. ಈ ಪ್ರಾರ್ಥನೆಯ ನಂತರ ಧರ್ಮೋಪದೇಶ ನಡೆಯುತ್ತದೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಕೋರುತ್ತಾರೆ ಮತ್ತು ಇದು ದೇವರ ಆರ್ಶೀವಾದ ಪಡೆಯಲು ಇರುವ ಮಾರ್ಗ ಎಂದು ನಂಬಲಾಗಿದೆ.

ಆಚರಣೆಗಳು ಈದ್-ಉಲ್-ಫಿತರ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನೆ ಮತ್ತು ಧರ್ಮೋಪದೇಶಗಳಿಗೆ ಹಾಜರಾಗುತ್ತಾರೆ. ಈ ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸದ ನಂತರ ತಾವು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ. ಪ್ರತಿ ಮನೆಯಲ್ಲೂ ಪುಲಾವ್, ಸಲಾನ್, ಬಿರಿಯಾನಿ, ಹಲೀಮ್, ನಿಹಾರಿ, ಚಾಪ್ಲಿ ಕಬಾಬ್​, ಕೋಫ್ಟೆ ಮತ್ತು ಇನ್ನು ಹೆಚ್ಚು ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ.

ಸಿಹಿ ತಿಂಡಿಗಳಾದ ಸೆವಿಯನ್, ಸಂಪೂರ್ಣ ಕೊರ್ಮಾ (ಹಾಲಿನಲ್ಲಿ ಬೇಯಿಸಿದ ಸಿಹಿಯಾದ ಪದಾರ್ಥ), ಶಾಹಿ ತುಕ್ಡಾ ಮತ್ತು ರೋಸ್ ಶರ್ಬತ್ ಕುಟುಂಬ ಸದಸ್ಯರು, ಅತಿಥಿಗಳು ಮತ್ತು ಬಾಂಧವರಿಗೆ ನೀಡಲಾಗುತ್ತದೆ. ಮುಸ್ಲಿಮರು ಈ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ. ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow