ಐಪಿಎಲ್ ರಿಟೆನ್ಶನ್ 2025: ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಪ್ರಾಂಚೈಸಿಗಳು!

ನವೆಂಬರ್ 3, 2024 - 09:56
 0  17
ಐಪಿಎಲ್ ರಿಟೆನ್ಶನ್ 2025: ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಪ್ರಾಂಚೈಸಿಗಳು!

ಬಹು ನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಫ್ರಾಂಚೈಸಿಯ ನಿರ್ಧಾರಗಳು ಅಚ್ಚರಿ ಮೂಡಿಸಿದ್ದರೂ, ಕೆಲವು ನಿರೀಕ್ಷೆಗಳು ನಿಜವಾಗಿದೆ. 

ಇನ್ನೂ ಚೆನ್ನೈ ಸೂಪರ್‌ ಕಿಂಗ್ಸ್‌  ತಂಡದ ಉಸಿರು ಆಗಿರುವ ಲೆಜೆಂಡ್‌ ಕ್ರಿಕೆಟಿಗ ಎಂ.ಎಸ್‌ ಧೋನಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯಲ್ಲಿ ಮುಂದುವರಿಯುವುದು ಪಕ್ಕಾ ಆಗಿದೆ. ನಿರೀಕ್ಷೆಯಂತೆ ಎಂ.ಎಸ್‌ ಧೋನಿ ಅವರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಂಡಿದ್ದು, ಧೋನಿ ಅಭಿಮಾನಿಗಳು ಫುಲ್‌ಖುಷ್‌ ಆಗಿದ್ದಾರೆ.

ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್, ರಿಷಭ್ ಪಂತ್ ಸೇರಿ ಪ್ರಮುಖ ಆಟಗಾರರೇ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಿಟೇನ್​ ಆದ ಆಟಗಾರರ ಪೈಕಿ ಅತಿ ಹೆಚ್ಚು ಮೊತ್ತ ಪಡೆದ ಭಾರತದ ಮೊದಲ ಆಟಗಾರ ವಿರಾಟ್ ಕೊಹ್ಲಿ ಆಗಿದ್ದಾರೆ. ಅವರು 21 ಕೋಟಿ ಪಡೆದಿದ್ದಾರೆ. ಆದರೆ ಒಟ್ಟಾರೆ ಹೆನ್ರಿಚ್ ಕ್ಲಾಸೆನ್ 23 ಕೋಟಿ ಪಡೆದು ದಾಖಲೆ ಬರೆದಿದ್ದಾರೆ. ನಿಕೋಲಸ್ ಪೂರನ್ ಸಹ 21 ಕೋಟಿ ಪಡೆದಿದ್ದಾರೆ.

RCB:- ವಿರಾಟ್ ಕೊಹ್ಲಿ (21 ಕೋಟಿ), ರಜತ್ ಪಾಟೀದಾರ್​ (11 ಕೋಟಿ), ಯಶ್ ದಯಾಳ್ (5 ಕೋಟಿ) 

CSK:- ಋತುರಾಜ್ ಗಾಯಕ್ವಾಡ್ (18 ಕೋಟಿ), ಮತೀಶಾ ಪತಿರಾಣ (13 ಕೋಟಿ), ಶಿವಂ ದುಬೆ (12 ಕೋಟಿ), ರವೀಂದ್ರ ಜಡೇಜಾ (18 ಕೋಟಿ), ಎಂಎಸ್ ಧೋನಿ (4 ಕೋಟಿ)

KKR:- ರಿಂಕು ಸಿಂಗ್ (13 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ), ಸುನಿಲ್ ನರೇನ್ (12 ಕೋಟಿ), ಆ್ಯಂಡ್ರೆ ರಸೆಲ್ (12 ಕೋಟಿ), ಹರ್ಷಿತ್ ರಾಣಾ (4 ಕೋಟಿ), ರಮಣ್ ದೀಪ್ ಸಿಂಗ್ (4 ಕೋಟಿ)

ಪಂಜಾಬ್:- ಅಶುತೋಶ್ ಶರ್ಮಾ (4 ಕೋಟಿ), ಶಶಾಂಕ್ ಸಿಂಗ್ (5.5 ಕೋಟಿ)

RR:- ಸಂಜು ಸ್ಯಾಮ್ಸನ್ (18 ಕೋಟಿ), ಯಶಸ್ವಿ ಜೈಸ್ವಾಲ್ (18 ಕೋಟಿ), ರಿಯಾನ್ ಪರಾಗ್ (14 ಕೋಟಿ), ಧ್ರುವ್ ಜುರೆಲ್ (14 ಕೋಟಿ), ಶಿಮ್ರಾನ್ ಹೆಟ್ಮೆಯರ್ (11 ಕೋಟಿ), ಸಂದೀಪ್ ಶರ್ಮಾ (4 ಕೋಟಿ)

LSG:- ನಿಕೋಲಸ್ ಪೂರನ್ (21 ಕೋಟಿ), ರವಿ ಬಿಷ್ಣೋಯ್ (11 ಕೋಟಿ), ಮಯಾಂಕ್ ಯಾದವ್ (11 ಕೋಟಿ), ಮೊಹ್ಸಿನ್ ಖಾನ್ (4 ಕೋಟಿ)

MI:- ರೋಹಿತ್​ ಶರ್ಮಾ (16.30 ಕೋಟಿ), ಹಾರ್ದಿಕ್ ಪಾಂಡ್ಯ (16.35 ಕೋಟಿ), ಜಸ್ಪ್ರೀತ್ ಬುಮ್ರಾ (18 ಕೋಟಿ), ಸೂರ್ಯಕುಮಾರ್ ಯಾದವ್ (16.35 ಕೋಟಿ), ತಿಲಕ್ ವರ್ಮಾ (8 ಕೋಟಿ)

SRH:- ಪ್ಯಾಟ್ ಕಮಿನ್ಸ್ (18 ಕೋಟಿ), ಹೆನ್ರಿಚ್ ಕ್ಲಾಸೆನ್ (23 ಕೋಟಿ), ಅಭಿಷೇಕ್ ಶರ್ಮಾ (14 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ), ನಿತೀಶ್ ರೆಡ್ಡಿ (6 ಕೋಟಿ), ಆಯುಷ್ ಬದೋನಿ (4 ಕೋಟಿ)

DC:- ಅಕ್ಷರ್ ಪಟೇಲ್ (16.5 ಕೋಟಿ), ಕುಲ್ದೀಪ್ ಯಾದವ್ (14.25 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (10 ಕೋಟಿ), ಅಭಿಷೇಕ್ ಪೋರೆಲ್ (4 ಕೋಟಿ)

GT:- ರಶೀದ್ ಖಾನ್ (18 ಕೋಟಿ), ಶುಭ್ಮನ್ ಗಿಲ್ (16.5 ಕೋಟಿ), ಸಾಯಿ ಸುದರ್ಶನ್ (8.5 ಕೋಟಿ), ರಾಹುಲ್ ತೆವಾಟಿಯಾ (4 ಕೋಟಿ), ಶಾರೂಖ್ ಖಾನ್ (4 ಕೋಟಿ)

ಹರಾಜಿನಲ್ಲಿ ಕಾಣಿಕೊಳ್ಳಲಿರುವ ಭಾರತದ ದೊಡ್ಡ ಹೆಸರುಗಳು
ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ರಾಹುಲ್ ಚಹರ್.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow