ಕೌಟುಂಬಿಕ ಕಲಹ: ಮಹಿಳೆ ಹತ್ಯೆಗೈದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುರುಳರು!

ನವೆಂಬರ್ 1, 2024 - 17:22
 0  13
ಕೌಟುಂಬಿಕ ಕಲಹ: ಮಹಿಳೆ ಹತ್ಯೆಗೈದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುರುಳರು!

ಕಲಬುರ್ಗಿ:- ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆ ತಾಲೂಕಿನ ಇಟಗಾ ಗ್ರಾಮದ ಬಳಿ ಜರುಗಿದೆ.  ಮೃತ ಮಹಿಳೆಯನ್ನು 29 ವರ್ಷದ ಜ್ಯೋತಿ ಎನ್ನಲಾಗಿದೆ. 

ಮೃತ ಮಹಿಳೆಗೆ ಕಳೆದ 10 ವರ್ಷದ ಹಿಂದೆ ಮದುವೆ ಆಗಿತ್ತು. ಈಕೆ 5 ವರ್ಷದಿಂದ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ. 

ನಿನ್ನೆ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಜ್ಯೋತಿ, ಮಧ್ಯಾಹ್ನ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow