ಒಕ್ಕಲಿಗ ಸಂಪ್ರದಾಯದಂತೆ ಎಸ್.ಎಂ ಕೃಷ್ಣ ಅಂತ್ಯಕ್ರಿಯೆ! ಹುಟ್ಟೂರಿನಲ್ಲಿ ಸಕಲ ಸಿದ್ಧತೆ

ಡಿಸೆಂಬರ್ 11, 2024 - 08:40
 0  10
ಒಕ್ಕಲಿಗ ಸಂಪ್ರದಾಯದಂತೆ ಎಸ್.ಎಂ ಕೃಷ್ಣ ಅಂತ್ಯಕ್ರಿಯೆ! ಹುಟ್ಟೂರಿನಲ್ಲಿ ಸಕಲ ಸಿದ್ಧತೆ

 

ಬೆಂಗಳೂರು: ಎಸ್‌.ಎಂ ಕೃಷ್ಣ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಇಂದು ಬೆಳಗ್ಗೆ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ನಿವಾಸದಿಂದ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ತೆರೆದ ವಾಹನದ ಮೂಲಕ ಹೊರಡಲಿರೋ ಎಸ್ಎಂಕೆ ಅಂತಿಮ ಮೆರವಣಿಗೆಯಲ್ಲಿ ಅಲ್ಲಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಕೆಂಗೇರಿ ಮಾರ್ಗವಾಗಿ ಮದ್ದೂರು ತಲುಪಲಿದ್ದು, ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಮದ್ದೂರಿನ ಸೋಮನಹಳ್ಳಿಗೆ ತಲುಪಲಿದೆ. ಇನ್ನು ಮಾರ್ಗ ಮಧ್ಯದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಾರ್ಗ ಮಧ್ಯೆ ವಾಹನ ನಿಲ್ಲಿಸಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸ್ಥಳಗಳಲ್ಲಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಅಂತಿ ದರ್ಶನ ಪಡೆದುಕೊಳ್ಳಲು ಅವಕಾಶ ಇರಲಿದೆ.

ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಶಿಫ್ಟ್ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 6:30 ವೇಳೆಗೆ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಮನೆಯಲ್ಲಿ ಪೂಜೆ ಸಲ್ಲಿಕೆ ಮಾಡಿದರು. ಇನ್ನು ಪೂಜೆ ಬಳಿಕ ಕೆಲ ಗಂಟೆಗಳಲ್ಲೇ ತೆರದ ವಾಹನದಲ್ಲಿ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಮಾರ್ಗ ಮಧ್ಯೆ ಐದಾರು ನಿಮಿಷಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಮದ್ದೂರಿನ ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಅಂತ್ಯಕ್ರಿಯೆ ನಡೆಯಲಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow