ಗೆಳೆಯನಿಗೆ ಟಕ್ಕರ್ ಕೊಟ್ಟ ಗೌತಮಿ: ಗೌತಮಿ ತೀರ್ಮಾನಕ್ಕೆ ಮಂಜು ರಿಯಾಕ್ಷನ್ ಹೇಗಿತ್ತು!?

ಡಿಸೆಂಬರ್ 11, 2024 - 20:00
 0  11
ಗೆಳೆಯನಿಗೆ ಟಕ್ಕರ್ ಕೊಟ್ಟ ಗೌತಮಿ:  ಗೌತಮಿ ತೀರ್ಮಾನಕ್ಕೆ ಮಂಜು ರಿಯಾಕ್ಷನ್ ಹೇಗಿತ್ತು!?

ಬಿಗ್ ಬಾಸ್ ಸೀಸನ್ 11 ರಲ್ಲಿ ಗೆಳೆತನದ ಮೂಲಕವೇ ಎಲ್ಲರ ಮನಗೆದ್ದಿರುವ ಸ್ಪರ್ಧಿಗಳೆಂದರೆ ಅದು ಗೌತಮಿ ಹಾಗೂ ಮಂಜು. 

ಆದರೆ ಇದೀಗ ಯಾಕೋ ಮಂಜು ಹಾಗೂ ಗೌತಮಿ ಸ್ನೇಹದಲ್ಲಿ ಬಿರುಕು ಬಿಟ್ಟಿರುವ ಮುನ್ಸೂಚನೆ ಕಾಣುತ್ತಿದೆ. ಇಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಎಪಿಸೋಡ್​ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವೈಸ್​ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಂತರ ನಡೆದ ಟಾಸ್ಕ್​ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಟ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow