ಅರೆಸ್ಟ್ ಆಗ್ತಾರಾ ಅಲ್ಲು ಅರ್ಜುನ್!?ಹೈಕೋರ್ಟ್​ ಕಟಕಟೆಯಲ್ಲಿ ಪುಷ್ಪ ಸ್ಟಾರ್!?

ಡಿಸೆಂಬರ್ 12, 2024 - 16:07
 0  10
ಅರೆಸ್ಟ್ ಆಗ್ತಾರಾ ಅಲ್ಲು ಅರ್ಜುನ್!?ಹೈಕೋರ್ಟ್​ ಕಟಕಟೆಯಲ್ಲಿ ಪುಷ್ಪ ಸ್ಟಾರ್!?

ಒಂದೆಡೆ ಪುಷ್ಪ 2 ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಖತ್ ಕಲೆಕ್ಷನ್ ಮಾಡುತ್ತಿದೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಗೆ ಸಿನಿಪ್ರಿಯರು ಫಿದಾ ಆಗಿದ್ದು, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 

ಇನ್ನೂ ಸಿನಿಮಾ ಸಕ್ಸಸ್ ಖುಷಿ ಬೆನ್ನಲ್ಲೇ ಅಲ್ಲು ಅರ್ಜುನ್ ಗೆ ಸಂಕಷ್ಟ ಎದುರಾಗಿದೆ. ಹೌದು ಅಲ್ಲು ಅರ್ಜುನ್ ಗೆ ಬಂಧನ ಭೀತಿ ಕಾಡುತ್ತಿದ್ದು, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಪುಷ್ಪ-2 ಚಿತ್ರದ ಯಶಸ್ಸಿನಲ್ಲಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಧ್ಯಾ ಥಿಯೇಟರ್ ಘಟನೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ಅರ್ಜಿ ಸಲ್ಲಿಸಿದ್ದಾರೆ.

ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ -2 ಚಿತ್ರದ ಪ್ರೀಮಿಯರ್ ಶೋ ಡಿಸೆಂಬರ್ 4 ರಂದು ನಡೆದಿತ್ತು. ಈ ವೇಳೆ ಹೈದರಾಬಾದ್​​ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಪುಷ್ಪ-2 ವೀಕ್ಷಿಸಲು ಅಲ್ಲು ಅರ್ಜುನ್ ಬಂದಿದ್ದರು.

ನೆಚ್ಚಿನ ನಟನ ನೋಡಲು ಅಭಿಮಾನಿಗಳ ಸಾಗರ ಹರಿದುಬಂದಿತ್ತು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಅನ್ನೋ ಮಹಿಳೆ ಜೀವ ಕಳೆದುಕೊಂಡಿದ್ದರು. ಕಾಲ್ತುಳಿತ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜಿಯಲ್ಲಿ ಕೋರಿದ್ದಾರೆ.

ಹೀಗಾಗಿ ಕೋರ್ಟ್ ಅರ್ಜಿ ವಜಾ ಮಾಡದಿದ್ದರೆ ಅಲ್ಲೂ ಅರ್ಜುನ್ ಬಂಧನ ಆಗೋ ಸಾಧ್ಯತೆ ಹೆಚ್ಚಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow