ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ವರ್ಷಕ್ಕೆ iPhone 17 ಬಿಡುಗಡೆ!

ಡಿಸೆಂಬರ್ 17, 2024 - 08:26
 0  14
ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ವರ್ಷಕ್ಕೆ  iPhone 17 ಬಿಡುಗಡೆ!

ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೊಸ ವರ್ಷಕ್ಕೆ  iPhone 17 ಬಿಡುಗಡೆ ಆಗಲಿದೆ. ಮುಂದಿನ ವರ್ಷ ಐಫೋನ್ 17 ಸಿರೀಸ್​ನಲ್ಲಿ ಒಟ್ಟು ನಾಲ್ಕು ಮಾಡೆಲ್​​ಗಳು ಬಿಡುಗಡೆ ಆಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ. 

ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೋ ಮತ್ತು ಐಫೋನ್ 17 ಪ್ರೋ ಮ್ಯಾಕ್ಸ್​  ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 2025ರಲ್ಲಿ ಇವು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಇದು ಕೇವಲ 5mm ನಿಂದ 6mm ಸ್ಲಿಮ್ ಇರಲಿದೆ. ದ ವಾಲ್​ ಸ್ಟ್ರೀಟ್ ಜರ್ನಲ್ ನೀಡಿರುವ ಮಾಹಿತಿ ಪ್ರಕಾರ, ಅತ್ಯಂತ ಸ್ಲಿಮೆಸ್ಟ್ ಐಫೋನ್ ಆಗಲಿದೆ. ಇದು ಪ್ರೋ ಮಾಡೆಲ್ಸ್​ಗಿಂದ ಕಡಿಮೆ ಬೆಲೆಗೆ ಸಿಗಲಿದ್ದು, ಭಾರತದಲ್ಲಿ ಇದರ ಬೆಲೆ ಸುಮಾರು 90 ಸಾವಿರ ರೂಪಾಯಿ ಆಗಿರಲಿದೆ.

ಇನ್ನೂ 2025ರಲ್ಲಿ ಬಿಡುಗಡೆ ಆಗುವ ಐಫೋನ್​​ 17 ಸಿರೀಸ್​ ಬಗ್ಗೆ ಕೆಲವು ವಿಚಾರಗಳು ಸೋರಿಕೆ ಆಗ್ತಿವೆ. ಇದೀಗ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಮುಂದಿನ ವರ್ಷ ಐಫೋನ್ 17 ಸಿರೀಸ್​ನಲ್ಲಿ ಒಟ್ಟು ನಾಲ್ಕು ಮಾಡೆಲ್​​ಗಳು ಬಿಡುಗಡೆ ಆಗಲಿವೆ ಎಂಬ ಮಾಹಿತಿ ಲೀಕ್ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow