ಗುಡ್ ನ್ಯೂಸ್: ಶೀಘ್ರದಲ್ಲೇ ನಡೆಯಲಿದೆ BCCI ಕೇಂದ್ರ ಗುತ್ತಿಗೆ – ಮತ್ತೆ ಈ ಸ್ಟಾರ್ ಬ್ಯಾಟರ್ಸ್ ಕಂಬ್ಯಾಕ್?

IPL 2025 ಈಗಾಗಲೇ ಆರಂಭವಾಗಿದ್ದು, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅದ್ಭುತ ಫಾರ್ಮ್ ನಲ್ಲಿ ಕಂಡು ಬಂದಿದ್ದಾರೆ. ಹೀಗಾಗಿ ಮತ್ತೆ ಗುತ್ತಿಗೆ ಪಡೆಯಲು BCCI ಮುಂದಾಗಿದೆ ಎಂದು ವರದಿ ಆಗಿದೆ.
ಹೌದು, ಬಿಸಿಸಿಐ 2024-25ನೇ ಸಾಲಿನ ಕೇಂದ್ರ ಗುತ್ತಿಗೆಯನ್ನು ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು, ಈ ಹಿಂದೆ ಗುತ್ತಿಗೆಯಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಮತ್ತೆ ಮರಳುವ ಸಾಧ್ಯತೆಯಿದೆ.
ಮಾ.29 ರಂದು ಗುವಾಹಟಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಸಿಸಿಐ ಮೂರು ದಿನಗಳ ಹಿಂದೆಯಷ್ಟೇ ಭಾರತ ಮಹಿಳಾ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಶೀಘ್ರದಲ್ಲೇ ಪುರುಷ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. ಕಳೆದ ವರ್ಷ 2023-24 ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಹೊರಗುಳಿದಿದ್ದರು.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರ ರನ್‌ಗಳ ಕೊಡುಗೆ ಅಪಾರವಾಗಿತ್ತು. ಒಟ್ಟು 5 ಪಂದ್ಯಗಳಲ್ಲಿ 48.60 ರನ್‌ರೇಟ್‌ನಲ್ಲಿ 243 ರನ್ ಗಳಿಸಿದ್ದರು. ಹೀಗಾಗಿ ಶ್ರೇಯಸ್ ತಮ್ಮ ಗುತ್ತಿಗೆಯನ್ನು ಮರಳಿ ಪಡೆಯುವ ಸಾಧ್ಯತೆಯಿದೆ.
ಇನ್ನೂ ಮಾ.22 ರಂದು ಪ್ರಾರಂಭವಾದ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯರಾಗಿ 106 ರನ್‌ಗಳಿಸಿದರು. ಆದರೆ ದೇಶೀಯ ಕ್ರಿಕೆಟ್ ಆಡದ ಹಿನ್ನೆಲೆಯಲ್ಲಿ ಗುತ್ತಿಗೆ ಕಳೆದುಕೊಂಡಿದ್ದ ಇಶಾನ್ ಕಿಶನ್ ಮರಳುತ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






