ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಅತ್ಯಾಚಾರ ಹೆಚ್ಚಾಗಿದೆ: CT ರವಿ ಬೇಸರ!

ಹಾಸನ:- ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಅತ್ಯಾಚಾರ ಹೆಚ್ಚಾಗಿದೆ ಎಂದು MLC CT ರವಿ ಬೇಸರ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ 807 ಅತ್ಯಾಚಾರ ಆಗಿವೆ. ತಂದೆ ಜೊತೆ ಮಗಳು ಹೋಗುವ ಹಾಗಿಲ್ಲ, ಅಣ್ಣ-ತಂಗಿ ಜೊತೆ ಹೋಗುವ ಹಾಗಿಲ್ಲ, ವಿದೇಶಿ ಪ್ರವಾಸಿಗರು ಬಂದರೆ ಅತ್ಯಾಚಾರ ಮಾಡ್ತಾರೆ. 1,500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, 1,530 ಕೊಲೆಯಾಗಿವೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರೂಪ. ಸರ್ಕಾರಿ ಅಧಿಕಾರಿ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜನರು ಸುಖವಾಗಿದ್ದಾರೆ ಅಂಥ ಭಾವಿಸಬೇಕಾ? ಹೆಂಗಸರಿಗೆ ಫ್ರೀ, ಗಂಡನ ಜೇಬಿಗೆ ಕತ್ತರಿ. ಪಿಕ್‌ಪ್ಯಾಕೆಟ್ ಅಂದರೆ ಗೊತ್ತಿಲ್ಲದೆ ಮಾಡ್ತಾರೆ ಅಂದುಕೊಳ್ಳಬಹುದು. ಸ್ಟಾಂಪ್ ಪೇಪರ್ ಬೆಲೆ ಎಷ್ಟು? ಇದಕ್ಕಿಂತ ಮನೆಹಾಳರು ಬೇಕು. ಕಸದ ಮೇಲೂ ಟ್ಯಾಕ್ಸ್, ಬರ್ತ್, ಡೆತ್‌ಸರ್ಟಿಫಿಕೇಟ್‌ಗೂ ಡಬಲ್. ಚಂಬಲ್ ಕಣಿವೆ ಡಕಾಯಿತರು ರಾತ್ರಿ ಬರುತ್ತಿದ್ದರು ಕಳ್ಳತನಕ್ಕೆ. ಆದರೆ, ಕಾಂಗ್ರೆಸ್‌ನವರು ಹಗಲು ವೇಳೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಪ್ರತಿಕ್ರಿಯೆ ಏನು?






