ಇನ್ಸ್ಟಾ ಲವ್: 1 ವಾರದಲ್ಲಿ ಪರಿಚಯವಾದ ಗೆಳೆಯನ ಜೊತೆ ಪತ್ನಿ ಎರಡನೇ ಮದುವೆ: ಮೊದಲ ಪತಿ ಕಂಗಾಲು!

ನೆಲಮಂಗಲ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಹಿಳೆ ಓರ್ವಳು ಮೊದಲ ಗಂಡನನ್ನು ಬಿಟ್ಟು ನಿನ್ನೆ, ಮೊನ್ನೆ ಪರಿಚಯವಾದ ಇನ್‌ಸ್ಟಾ ಗೆಳೆಯನ ಜೊತೆ ಓಡಿ ಹೋಗಿ ಎರಡನೇ ಮದುವೆ ಆಗಿರುವ ಘಟನೆ ಜರುಗಿದೆ.
ನೇತ್ರಾವತಿ ಎಂಬ ಮಹಿಳೆಯೇ ಇನ್ಸ್ಟಾ ಲವರ್ ಹಿಂದೆ ಓಡಿ ಹೋಗಿರೋದು. ರಮೇಶ್ ಎಂಬುವವರ ಜೊತೆ ಕಳೆದ 13 ವರ್ಷಗಳ ಹಿಂದೆ ಮದುವೆ ಆಗಿದ್ದರು. ಈ ಮುದ್ದಾದ ಸಂಸಾರಕ್ಕೆ ಒಂದು ಮಗು ಕೂಡ ಇತ್ತು.
ಆದರೆ ಮಹಿಳೆಗೆ ಕಳೆದ 1 ವಾರದ ಹಿಂದೆ ಇನ್‌ಸ್ಟಾದಲ್ಲಿ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯವು ಪ್ರೀತಿಗೆ ತಿರುಗಿತ್ತು. ನೇತ್ರಾವತಿಯು ಕೆಲವೇ ದಿನಗಳ ಪ್ರೀತಿಗಾಗಿ ಮೊದಲ ಪತಿಗೆ ಕೈಕೊಟ್ಟು, ಸಂತೋಷ್ ಜೊತೆ ದೇವಾಲಯಲ್ಲಿ ಎರಡನೇ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವೀಡಿಯೋವನ್ನು ನೋಡಿ ಮೊದಲ ಪತಿ ಶಾಕ್ ಆಗಿದ್ದಾರೆ.
ಪೊಲೀಸರ ಭದ್ರತೆಯಲ್ಲಿ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನ ತೆಗೆದುಕೊಂಡು ಹೋಗಲು ಮನೆ ಬಳಿ ಬಂದ ನೇತ್ರಾವತಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






