ಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಹೆಜ್ಜೆ

ಜುಲೈ 20, 2025 - 13:11
 0  19
ಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಹೆಜ್ಜೆ

 

ಬೆಂಗಳೂರು: ಗರ್ಭಕಂಠದ ಕ್ಯಾನ್ಸರ್ನನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಕೆಲವು ತಾಲೂಕುಗಳಲ್ಲಿ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ನೀಡಲು ಪ್ರಾಯೋಗಿಕ ಯೋಜನೆ ರೂಪಿಸಿದೆ.

ಮುಖ್ಯವಾಗಿ ಗಣಿ ಬಾಧಿತ ಪ್ರದೇಶಗಳು ಮತ್ತು ಕಲ್ಯಾಣ ಕರ್ನಾಟಕದ 20 ತಾಲೂಕುಗಳು ಯೋಜನೆಯ ವ್ಯಾಪ್ತಿಗೆ ಬರುತ್ತಿದ್ದು, ಮಹಿಳೆಯರಲ್ಲಿ ಗಣಿಗಾರಿಕೆಯ ಪರಿಣಾಮವಾಗಿ ಕಂಡುಬರುತ್ತಿರುವ ಗರ್ಭಕಂಠದ ಕ್ಯಾನ್ಸರ್ ಹಿನ್ನಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಏನಿದು ಹೆಚ್ಪಿವಿ ಲಸಿಕೆ? ಏಕೆ ನೀಡಬೇಕು?

ಹೆಚ್ಪಿವಿ ಲಸಿಕೆ ಎಂದರೆ ಹ್ಯೂಮನ್ ಪ್ಯಾಪಿಲೋಮವೈರಸ್  ಲಸಿಕೆ. ಇದು ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್ ಮತ್ತು ಜನನಾಂಗದ ನರಹುಣ್ಣುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಭಾದಿಸುತ್ತಿರುವ ಎರಡನೆಯ ಅತಿ ಹೆಚ್ಚು ಕ್ಯಾನ್ಸರ್ ಆಗಿದೆ. ಲೈಂಗಿಕವಾಗಿ ಸಕ್ರಿಯವಾಗಿರುವವರಿಗೆಲ್ಲ ಒಂದಲ್ಲ ಒಂದು ಸೋಂಕು ಸಂದರ್ಭಗಳಲ್ಲಿ ಕಾಡಬಹುದು. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಾಗ ಹೆಚ್ಪಿವಿ ಸೋಂಕು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.

ಲೈಂಗಿಕವಾಗಿ ಸಕ್ರಿಯವಾಗುವ ಮೊದಲು 9ರಿಂದ 14ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಇವರಿಗೆ 0 ಮತ್ತು 6 ತಿಂಗಳಲ್ಲಿ 2 ಡೋಸ್ ವೇಳಾಪಟ್ಟಿಯ ಪ್ರಕಾರ ನೀಡಲಾಗುತ್ತದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಮತ್ತು ಪುರುಷರಿಗೆ 3 ಡೋಸ್ ವೇಳಾಪಟ್ಟಿ ಅಂದರೆ ಹೆಚ್.ಪಿ.ವಿ ಲಸಿಕೆ 0, 2 ಮತ್ತು 6ತಿಂಗಳಲ್ಲಿ ನೀಡಲಾಗುತ್ತದೆ. ಶೇ. 80ರಷ್ಟು ಹೆಣ್ಣುಮಕ್ಕಳಿಗೆ ಲಸಿಕೆ ನೀಡುವುದರಿಂದ ಗಂಡುಮಕ್ಕಳಿಗೆ ಹೆಚ್‌.ಪಿ.ವಿ ಸೋಂಕು ಹರಡುವಿಕೆ ತಡೆಯಬಹುದಾಗಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow