ನಡುರಸ್ತೆಯಲ್ಲೇ ಪಲ್ಟಿ ಹೊಡೆದ KSRTC ಬಸ್: 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ!

ಸೆಪ್ಟೆಂಬರ್ 30, 2024 - 14:07
 0  21
ನಡುರಸ್ತೆಯಲ್ಲೇ ಪಲ್ಟಿ ಹೊಡೆದ KSRTC ಬಸ್: 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ!

ಮಂಡ್ಯ:- ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರು- ಮೈಸೂರು ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್​​ಆರ್​ಟಿಸಿ ಬಸ್​ ಭಯಾನಕವಾಗಿ ಪಲ್ಟಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ಕಡೆಯಿಂದ ಮಂಡ್ಯ ಕಡೆಗೆ ಕೆಎಸ್​ಆರ್​​ಟಿಸಿ ಬಸ್​ ಹೋಗುತ್ತಿತ್ತು. ಈ ವೇಳೆ ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಬಸ್​ ಅನ್ನು ಎಕ್ಸ್​​ಪ್ರೆಸ್​ ವೇಯಿಂದ ಸರ್ವೀಸ್​ ರಸ್ತೆ ಕಡೆಗೆ ಹೋಗುವಾಗ ಬಸ್​ ಪಲ್ಟಿಯಾಗಿದೆ. ಪಲ್ಟಿ ಆಗುವಾಗ ಅಲ್ಲೇ ನಿಂತಿದ್ದ ಕಂಟೈನರ್​ಗೂ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಂಟೈನರ್ ಡ್ಯಾಮೇಜ್ ಆಗಿದ್ದು ಬಸ್​ಗೂ ಹಾನಿ ಯಾಗಿದೆ. ಬಸ್​ನ ಮುಂಭಾಗವೆಲ್ಲ ಫುಲ್ ನಜ್ಜುಗುಜ್ಜಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow