ಖರ್ಗೆ ಸಾಯಬಾರದು, ಅಭಿವೃದ್ಧಿ ಹೊಂದಿದ ಭಾರತ ನೋಡಲು ಬದುಕಿರಲಿ: ಅಮಿತ್ ಶಾ!

ಸೆಪ್ಟೆಂಬರ್ 30, 2024 - 21:05
 0  10
ಖರ್ಗೆ ಸಾಯಬಾರದು, ಅಭಿವೃದ್ಧಿ ಹೊಂದಿದ ಭಾರತ ನೋಡಲು ಬದುಕಿರಲಿ: ಅಮಿತ್ ಶಾ!

ನವದೆಹಲಿ:-ಮಲ್ಲಿಕಾರ್ಜುನ ಖರ್ಗೆ ಸಾಯಬಾರದು, ಅಭಿವೃದ್ಧಿ ಹೊಂದಿದ ಭಾರತ ನೋಡಲು ಬದುಕಿರಲಿ ಎಂದು ಹೇಳುವ ಮೂಲಕ ಅಮಿತ್ ಶಾ ಅವರು ಮಾತಿನಲ್ಲೇ ಛಾಟಿ ಬೀಸಿದ್ದಾರೆ. 

ನನಗೆ ಈಗ 83 ವರ್ಷ, ಪ್ರಧಾನಿ ಮೋದಿಯನನ್ನು ಕುರ್ಚಿಯಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದು ಹೇಳಿಕೆ ನೀಡಿದ್ದ ಖರ್ಗೆಗೆ ಶಾ ಪ್ರತ್ಯುತ್ತರ ನೀಡಿದ್ದಾರೆ.

ಖರ್ಗೆಯವರು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅವಮಾನಕರವಾಗಿ ಮಾತನಾಡಿದ್ದಾರೆ, ಅನಾವಶ್ಯಕವಾಗಿ ವೈಯಕ್ತಿಕ ವಿಚಾರಗಳಿಗೆ ಮೋದಿಯವರನ್ನು ಎಳೆದು ತಂದಿದ್ದಾರೆ. ಪ್ರಧಾನಿ ಮೋದಿಯವರ ಮೇಲೆ‌ ಎಷ್ಟು ದ್ವೇಷ ಇದೆ ಎನ್ನುವುದನ್ನು ತೋರಿಸುತ್ತದೆ.

ಖರ್ಗೆಯವರ ಆರೋಗ್ಯ ಸುಧಾರಿಸಲಿ ಎಂದು ಮೋದಿಯವರು ಹಾಗೂ ನಾನು ಪ್ರಾರ್ಥನೆ ಮಾಡುತ್ತೇನೆ ಮೋದಿ 2047 ಅಭಿವೃದ್ಧಿ ಹೊಂದಿದ ಭಾರತವನ್ನು ನೋಡುವವರೆಗೂ ಬದುಕಿರಲಿ ಎಂದು ಹೇಳಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow