MS Dhoni: ಲಾಸ್ ಆದ ಕೂಲ್ ಕ್ಯಾಪ್ಟನ್: ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ!? ಯಾಕೆ ಏನಾಯ್ತು!?

2025 ರ IPL ನಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಕೋಟಿ ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ಐಪಿಎಲ್ 2008ರ ನಿಯಮದ ಪ್ರಕಾರ ಯಾವುದೇ ಪ್ಲೇಯರ್ ಇಂಟರ್ನ್ಯಾಷನಲ್ ಕ್ರಿಕೆಟ್ನಿಂದ ನಿವೃತ್ತಿಯಾದ್ರೆ ಅಥವಾ ಬಿಸಿಸಿಐ ಒಪ್ಪಂದದಿಂದ 5 ವರ್ಷ ದೂರವಿದ್ದರೇ ಆ ಆಟಗಾರನನ್ನ ಅನ್ಕ್ಯಾಪ್ಡ್ ಪ್ಲೇಯರ್ ಪಟ್ಟಿಗೆ ಸೇರಿಸಲಾಗುತ್ತದೆ. 2021ರ ವರೆಗೆ ಈ ರೂಲ್ಸ್ ಬಳಕೆಗೆ ಬಾರದ ಕಾರಣ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಎಂಎಸ್ ಧೋನಿಗಾಗಿ ಇದನ್ನು ಮತ್ತೆ ಆರಂಭಿಸಲಾಗಿದೆ. ಧೋನಿ ಈ ಸಲ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸಂಭಾವನೆಯಲ್ಲಿ ಭಾರೀ ಕಡಿತವಾಗಿದೆ.
2022ರ ಆವೃತ್ತಿಯಲ್ಲಿ ಮಾಜಿ ಕೂಲ್ ಕ್ಯಾಪ್ಟನ್ ಧೋನಿ ರಿಟೈನ್ ಆಟಗಾರನಾಗಿ ಸಿಎಸ್ಕೆಯಿಂದ 12 ಕೋಟಿ ಪಡೆಯುತ್ತಿದ್ದರು. ಕಳೆದ ಸೀಸನ್ನಲ್ಲೂ ಸಿಎಸ್ಕೆ ಫ್ರಾಂಚೈಸಿ 12 ಕೋಟಿ ರೂ.ಗಳನ್ನ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈಗ ಧೋನಿ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲ್ಲಿದ್ದಾರೆ. ಹೀಗಾಗಿ ಕೇವಲ 4 ಕೋಟಿ ರೂಪಾಯಿ ಮಾತ್ರ ಈ ಬಾರಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






