ಆಯುಷ್ ಮ್ಹಾತ್ರೆ ನೇತೃತ್ಲದಲ್ಲಿ ಭಾರತ u-19: : 14 ವರ್ಷದ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ!

ಆಗಸ್ಟ್ 1, 2025 - 09:02
 0  9
ಆಯುಷ್ ಮ್ಹಾತ್ರೆ ನೇತೃತ್ಲದಲ್ಲಿ ಭಾರತ u-19: : 14 ವರ್ಷದ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ!

 

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೆಪ್ಟೆಂಬರ್ 2025ರಲ್ಲಿ ನಡೆಯುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಅಂಡರ್-19 ಪುರುಷರ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತ ಅಂಡರ್-19 ತಂಡವು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕತ್ವ ವಹಿಸಿದ್ದ ಆಯುಷ್ ಮ್ಹಾತ್ರೆ, ಈ ಬಾರಿ ಸಹ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ವಿಹಾನ್ ಮಲ್ಹೋತ್ರಾ ನೇಮಕಗೊಂಡಿದ್ದಾರೆ. ಈ ತಂಡದಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಗಮನಸೆಳೆದ 14 ವರ್ಷದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಕೂಡ ಅವಕಾಶ ದೊರಕಿದೆ.

ಒಟ್ಟಾರೆ 17 ಆಟಗಾರರನ್ನು ಮುಖ್ಯ ತಂಡದಲ್ಲಿ ಹಾಗೂ ಐವರು ಆಟಗಾರರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ರಾಹುಲ್ ಕುಮಾರ್, ಅಭಿಗ್ಯಾನ್ ಕುಂಡು, ಆರ್‌ಎಸ್ ಅಂಬರೀಶ್ ಹಾಗೂ ಕನಿಷ್ಕ ಚೌಹಾಣ್ ಸೇರಿದಂತೆ ಇನ್ನೂ ಹಲವು ಪ್ರತಿಭಾನ್ವಿತ ಯುವಕರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಮ್ಯಾಚ್ ವೇಳಾಪಟ್ಟಿ:

  • ಮೊದಲ ಏಕದಿನ ಪಂದ್ಯ: ಸೆಪ್ಟೆಂಬರ್ 21
  • ಎರಡನೇ ಏಕದಿನ ಪಂದ್ಯ: ಸೆಪ್ಟೆಂಬರ್ 24
  • ಮೂರನೇ ಏಕದಿನ ಪಂದ್ಯ: ಸೆಪ್ಟೆಂಬರ್ 26
  • ಮೊದಲ ಟೆಸ್ಟ್ ಪಂದ್ಯ: ಸೆಪ್ಟೆಂಬರ್ 30 – ಅಕ್ಟೋಬರ್ 3
  • ಎರಡನೇ ಟೆಸ್ಟ್ ಪಂದ್ಯ: ಅಕ್ಟೋಬರ್ 7 – ಅಕ್ಟೋಬರ್ 10

ಆಯುಷ್ ಮ್ಹಾತ್ರೆ ( ನಾಯಕ ), ವಿಹಾನ್ ಮಲ್ಹೋತ್ರಾ ( ಉಪನಾಯಕ ), ವೈಭವ್ ಸೂರ್ಯವಂಶಿ , ವೇದಾಂತ್ ತ್ರಿವೇದಿ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು ( ವಿಕೆಟ್ ಕೀಪರ್ ), ಹರ್ವಂಶ್ ಸಿಂಗ್ ( ವಿಕೆಟ್ ಕೀಪರ್ ), ಆರ್ ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ನಮನ್ ಪುಷ್ಪಕ್, ಹೆನಿಲ್ ಪಟೇಲ್, ಡಿ ದೀಪೇಶ್, ಕಿಶನ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಖಿಲಾನ್ ಪಟೇಲ್, ಉಧವ್ ಮೋಹನ್, ಅಮನ್ ಚೌಹಾಣ್.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow