ಕುಡಿದ ಮತ್ತಿನಲ್ಲಿ ಮಗನಿಂದಲೇ ತಾಯಿಯ ಕೊಲೆ..! ಶವದ ಪಕ್ಕವೇ ಮಲಗಿದ್ದ ಪಾಪಿ ಅರೆಸ್ಟ್.!

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತಾಯಿಯನ್ನು ಕೊಂದು, ಬಳಿಕ ಆಕೆಯ ಮೃತದೇಹಕ್ಕೆ ಬೆಂಕಿ ಹಾಕಿದ ಭೀಕರ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗುತ್ತಿದೆ.
ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್ ಕಳೆದ ರಾತ್ರಿ ತಾಯಿಯನ್ನು ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ತಾಯಿ ಮೃತದೇಹ ಬೆಂಕಿಯಲ್ಲಿ ಬೇಯುತ್ತಿದ್ದರೆ ಕೊಲೆಗಾರ ಮಗ ಪ್ರಜ್ಞೆ ಇಲ್ಲದವನಂತೆ ಅಲ್ಲೇ ಪಕ್ಕದಲ್ಲಿ ಮಲಗಿದ್ದಾನೆ.
ತಾಯಿ ಭವಾನಿ ಮೃತದೇಹ ಬಹುತೇಕ ಸುಟ್ಟುಹೋಗಿದ್ದು ಕಾಲು ಹಾಗೂ ಕೈ ಮಾತ್ರ ಉಳಿದಿದೆ. ಮರುದಿನ ಬೆಳಗ್ಗೆ ಶಂಕಿತ ಸ್ಥಿತಿಯಲ್ಲಿ ಹೊಗೆಯಿಂದ ಕೂಡಿದ ಮನೆ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪುತ್ರ ಪವನ್ನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






