ಬಿಗ್ ಮನೆಯಲ್ಲಿ ಮೂಲ ನಿಯಮವೇ ಬ್ರೇಕ್! ಶಿಶಿರ್ ಎತ್ತಿ ಬಿಸಾಡಿದ ಕ್ಯಾಪ್ಟನ್, ಮನೆಯಿಂದ ಹೋಗ್ತಾರಾ ಉಗ್ರಂ ಮಂಜು!

ನವೆಂಬರ್ 28, 2024 - 20:03
 0  18
ಬಿಗ್ ಮನೆಯಲ್ಲಿ ಮೂಲ ನಿಯಮವೇ ಬ್ರೇಕ್! ಶಿಶಿರ್ ಎತ್ತಿ ಬಿಸಾಡಿದ ಕ್ಯಾಪ್ಟನ್, ಮನೆಯಿಂದ ಹೋಗ್ತಾರಾ ಉಗ್ರಂ ಮಂಜು!

ಈ ವಾರ ಬಿಗ್ ಬಾಸ್ ಮನೆ ಸಾಮ್ರಾಜ್ಯವಾಗಿ ಬದಲಾಗಿದ್ದು, ಕ್ಯಾಪ್ಟನ್ ಉಗ್ರಂ ಮಂಜು ಅವರು, ರಾಜರಾದರೆ, ಮೋಕ್ಷಿತಾ ಯುವರಾಣಿ ಆಗಿದ್ದಾರೆ. ಈ ಮೂಲಕ ವೀಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತಿದೆ. ಬಿಗ್​ಬಾಸ್ ಸಾಮ್ರಾಜ್ಯದಲ್ಲಿ ಕ್ಯಾಪ್ಟನ್ ಮಂಜಣ್ಣ ಮಹಾರಾಜನ ಸ್ಥಾನ ಅಲಂಕರಿಸಿ ದರ್ಬಾರ್ ನಡೆಸ್ತಿದ್ದರು. ರಾಜನ ದರ್ಬಾರ್​ಗೆ ಟ್ವಿಸ್ಟ್ ಇರಲಿ ಎಂದು ಮೋಕ್ಷಿತಾ ಅವರನ್ನು ಯುವರಾಣಿಯನ್ನಾಗಿ ಬಿಗ್​ಬಾಸ್ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ಪ್ರತ್ಯೇಕಗೊಂಡಿದ್ದಾರೆ. 

ಮೋಕ್ಷಿತಾ ಯುವ ರಾಣಿ ಆಗಿ ಎಂಟ್ರಿ ಕೊಟ್ಟ  ಮೇಲೆ ಗಾರ್ಡನ್ ಏರಿಯಾದಲ್ಲಿ ತಮ್ಮ ಪ್ರಜೆಗಳ ಜೊತೆ ಚರ್ಚೆ ಮಾಡಲು ಜಾಗ ನೀಡಲಾಗಿತ್ತು. ಇದನ್ನು ಕನ್ಫೆಷನ್‌ ರೂಮ್‌ಗೆ ಕರೆದು ಬಿಗ್ ಬಾಸ್ ಹೇಳಿದ್ದರು, ಇದನ್ನು ತಿಳಿಯದ ಮಂಜು ಜಾಗ ಕಸಿದುಕೊಳ್ಳಲು ಮುಂದಾಗುತ್ತಾರೆ. ಪ್ರಜೆ ಆಗಿದ್ದ ಶಿಶಿರ್ ತಮ್ಮ ಯುವರಾಣಿಯನ್ನು ಸೇಫ್ ಮಾಡಲು ಅಡ್ಡ ಹೋಗುತ್ತಾರೆ ಅಲ್ಲಿ ಕೋಪಗೊಂಡ ಉಗ್ರಂ ಮಂಜು ಶಿಶಿರ್‌ರನ್ನು ಎತ್ತಿ ಬಿಸಾಡುತ್ತಾರೆ. ಈ ಘಟನೆ ಒಂದೆರಡು ನಿಮಿಷಗಳ ಕಾಲ ನಡೆದಿದೆ. 

ಟಿವಿಯಲ್ಲಿ ಈ ಜಗಳವನ್ನು ಪ್ರಸಾರ ಮಾಡಲಾಗಿತ್ತು. ಮಂಜು ಶಿಶರ್‌ ಜೊತೆ ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ರಂಜಿತ್ ಕೇವಲ ಎದೆಗೆ ಎದೆ ಕೊಟ್ಟು ನಿಂತಿದ್ದಕ್ಕೆ ಮ್ಯಾನ್ ಹ್ಯಾಂಡ್ಲಿಂಗ್‌ ಎಂದು ಬಿಗ್ ಬಾಸ್ ಹೊರ ಹಾಕಿದ್ದರು ಆದರೆ ಇಲ್ಲಿ ಮಂಜು ಎತ್ತಿ ಬಿಸಾಡಿ ಶಿಶಿರ್‌ ಕಾಲಿನ ಭಾಗವನ್ನು ಬಿಗಿಯಾಗಿ ಇಟ್ಟುಕೊಂಡಿದ್ದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಲ್ಲಿ ಬಿಗ್ ಬಾಸ್ ಮಾಡುತ್ತಿರುವುದು ಮೋಸ ಎಂದು ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಅಲ್ಲದೆ ಈ ವಾರ ಮಾತುಕತೆಯಲ್ಲಿ ಸುದೀಪ್‌ ಮಂಜುಗೆ ಶಿಕ್ಷೆ ನೀಡಬೇಕು ಅಂತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow