17 ವರ್ಷಗಳ ನಂತರ ಮಾಲೇಗಾಂವ್ ತೀರ್ಪು ಪ್ರಕಟ: ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

ಜುಲೈ 31, 2025 - 11:52
 0  14
17 ವರ್ಷಗಳ ನಂತರ ಮಾಲೇಗಾಂವ್ ತೀರ್ಪು ಪ್ರಕಟ: ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

ನವದೆಹಲಿ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರವಾದ ತೀರ್ಪು ಹೊರ ಬಂದಿದೆ. ಬರೋಬ್ಬರಿ 17 ವರ್ಷಗಳ ನಂತರ ಮಹಾರಾಷ್ಟ್ರದ ಕೋಮು ಸೂಕ್ಷ್ಮ ಪಟ್ಟಣವಾದ ಮಾಲೇಗಾಂವ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯವು ಇಂದು ತನ್ನ ತೀರ್ಪು ನೀಡಿದೆ.

ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್​ ಅವರನ್ನು ಖುಲಾಸೆಗೊಳಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೇಗಾಂವ್ ನಗರದಲ್ಲಿ 17 ವರ್ಷಗಳ ಹಿಂದೆ ನಡೆದ, ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಪ್ರಕರಣದ ತೀರ್ಪು ಪ್ರಕಟಿಸಿದೆ.

ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (55) ಮತ್ತು ಸೇವೆ ಸಲ್ಲಿಸುತ್ತಿರುವ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (53) ಸೇರಿದಂತೆ ಹಲವು ಆರೋಪಿಗಳ ಹೆಸರು ಈ ಪ್ರಕರಣದಲ್ಲಿತ್ತು. ಸೆಪ್ಟೆಂಬರ್ 29, 2008 ರಂದು ರಂಜಾನ್ ತಿಂಗಳಿನಲ್ಲಿ ಮಾಲೆಗಾಂವ್‌ನ ಮುಸ್ಲಿಂ ಏರಿಯಾದಲ್ಲಿ ಈ ಪ್ರಕರಣ ಸಂಭವಿಸಿತ್ತು. ಇಂದು ತೀರ್ಪು ಪ್ರಕಟಿಸಿದ್ದು, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್​ ಅವರನ್ನು ಖುಲಾಸೆಗೊಳಿಸಲಾಗಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow