ಧರ್ಮಸ್ಥಳ ಕೇಸ್'ಗೆ ಹೊಸ ತಿರುವು: ಕೊನೆಗೂ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಪತ್ತೆ..!

ಮಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಎಸ್ಐಟಿ ಕಳೆದ ಒಂದು ವಾರದಿಂದ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಭೂಮಿ ಅಗೆದು ಕಳೇಬರ ಹುಡುಕುವ ಕಾರ್ಯ 2 ದಿನ ಪೂರ್ಣಗೊಂಡಿದೆ..
13ರ ಪೈಕಿ ಐದು ಕಡೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಇದೀಗ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ. ಇನ್ನೂ 6ನೇ ಗುಂಡಿಯಲ್ಲಿ ಮೂಳೆಗಳನ್ನು ಎಸ್ಐಟಿ ಸಂಗ್ರಹಿಸಿಕೊಂಡಿದೆ. ಅನಾಮಿಕ ಹೇಳಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.
6ನೇ ಪಾಯಿಂಟ್‌ನಲ್ಲಿ ಕೆಲ ಮೂಳೆಗಳು ಪತ್ತೆಯಾಗಿದೆ. ಇಂದೇ FSLಗೆ ಈ ಮೂಳೆಗಳನ್ನು ರವಾನಿಸೋ ಸಾಧ್ಯತೆ ಕೂಡ ಇದೆ. ಆರನೇ ಪಾಯಿಂಟ್ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕಾರ್ಮಿಕರು ಮತ್ತಷ್ಟು ಮೂಳೆಗಳನ್ನು ಹುಡುಕಲು ಮಣ್ಣು ಹೊರಗೆ ಹಾಕುತ್ತಿದ್ದಾರೆ. ಕಾರ್ಮಿಕರು ಈಗಾಗಲೇ ನಾಲ್ಕು ಅಡಿ ಅಗೆದಿದ್ದಾರೆ. ಗುಂಡಿಯ ಮಣ್ಣನ್ನು ಫಾರೆನ್ಸಿಕ್ ಪರಿಶೀಲನೆ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






