ಪ್ರಿಯಕರನ ಗನ್ ಪರಿಶೀಲಿಸುವಾಗ ಮಿಸ್ ಫೈರಿಂಗ್: ಯುವತಿ ಗಂಭೀರ!

ಜುಲೈ 30, 2025 - 21:05
 0  7
ಪ್ರಿಯಕರನ ಗನ್ ಪರಿಶೀಲಿಸುವಾಗ ಮಿಸ್ ಫೈರಿಂಗ್: ಯುವತಿ ಗಂಭೀರ!

ಬೆಂಗಳೂರು :- ಬೆಂಗಳೂರಿನ  ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಮಿಸ್​ ಫೈರಿಂಗ್ ಆಗಿ ಓರ್ವ ಯುವತಿಯ ಹೊಟ್ಟೆಗೆ ಗುಂಡು ತಗುಲಿದ ಘಟನೆ ಜರುಗಿದೆ. 

ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ರೆಚೆಲ್ ಎಂದು ಗುರುತಿಸಲಾಗಿದೆ. ಪ್ರಿಯಕರ ನಿಖಿಲ್​​​​ಗೆ ಸೇರಿದ ಗನ್ ರೆಚೆಲ್​ ಪರಿಶೀಲನೆ ಮಾಡುವಾಗ ಮಿಸ್ ಫೈರಿಂಗ್​​ ಆಗಿದೆ. ಗಾಯಾಳು ರೆಚೆಲ್​ ಮತ್ತು ನಿಖಿಲ್​ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಎರಡೂ ಕುಟುಂಬಗಳು ಸಿದ್ಧತೆ ನಡೆಸಿದ್ದವು. ನಿಖಲ್​ ಅವರ ಬಳಿ ಲೈಸೆನ್ಸ್ಡ್​​ ಗನ್​ ಇದೆ.

ಜು.28ರಂದು ನಿಖಿಲ್​​​​​ ಟೆರೆಸ್​ ಮೇಲೆ ಗನ್ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ರೆಚೆಲ್​ ಕೂಡ ಜೊತೆಯಲ್ಲಿದ್ದರು. ರೆಚೆಲ್​ ಪ್ರಿಯಕರ ನಿಖಿಲ್​ನಿಂದ ಗನ್​ ಪಡೆದು ಪರಿಶೀಲನೆ ನಡೆಸುತ್ತಿದ್ದಾಗ, ಮಿಸ್​ ಫೈರ್​ ಆಗಿ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ರೆಚೆಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡು ತಗುಲಿದ ಪರಿಣಾಮ ರೆಚೆಲ್​ ಅವರ ಒಂದು ಕಿಡ್ನಿಗೆ ಹಾನಿಯಾಗಿದೆ. ಹೀಗಾಗಿ, ವೈದ್ಯರು ರೆಚೆಲ್​ ಅವರ ಒಂದು‌ ಕಿಡ್ನಿಯನ್ನು ಹೊರ ತೆಗೆದಿದ್ದಾರೆ. ರೆಚೆಲ್​ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow