ನ್ಯಾಷನಲ್ ಕ್ರಷ್ ಗೆ ಕಾಡ್ತಿದೆ ಆ ನೋವು... ನಿಮ್ಮ ಆಯ್ಕೆಯಲ್ಲಿ ದುಡುಕಬೇಡಿ ಎಂದ ರಶ್ಮಿಕಾ!

ಮೇ 5, 2025 - 20:02
 0  12
ನ್ಯಾಷನಲ್ ಕ್ರಷ್ ಗೆ ಕಾಡ್ತಿದೆ ಆ ನೋವು...  ನಿಮ್ಮ ಆಯ್ಕೆಯಲ್ಲಿ ದುಡುಕಬೇಡಿ ಎಂದ ರಶ್ಮಿಕಾ!

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಹಿಟ್ ಮೂವಿ ಕೊಟ್ಟಿದ್ದು, ಸಾಕಷ್ಟು ಸಿನಿಮಾ ಆಫರ್ ಗಳು ಕೈಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಆ್ಯಕ್ಟೀವ್ ಇರುವ ರಶ್ಮಿಕಾ ಸಧ್ಯ ಸುದ್ದಿಯಲ್ಲಿದ್ದಾರೆ. 

ರಶ್ಮಿಕಾ ಡೈಲಿ ರೋಟಿನ್ ಅಪ್ಡೇಟ್ ಮಾಡೋ ಸ್ಟೋರಿ ಒಂದನ್ನ ಹಾಕಿದ್ರು.. ಮೇ 2 ದಿನ ಹೇಗ್ ಶುರುವಾಯ್ತು? ಶೂಟಿಂಗ್ ಹೇಗ್ ನಡೀತು? ಅಂತೆಲ್ಲ ತಮ್ಮ ಸ್ಟೋರಿಯಲ್ಲಿ ಬರೆದಿದ್ರು. ಈ ಟೈಮ್‌ನಲ್ಲಿ ಅವತ್ತಿನ ಶೂಟಿಂಗ್ ಕ್ಯಾನ್ಸಲ್ ಆದ ಬಗ್ಗೆಯೂ ಬರೆದಿದ್ರು. ಆದ್ರೆ ಈ ಪೋಸ್ಟ್ನಲ್ಲಿ ರಶ್ಮಿಕಾ ಹೇಳಿದ್ದ ಅದೊಂದು ಮಾತು ಈಗ ಅಭಿಮಾನಿಗಳ ಕಿವಿ ನೆಟ್ಟಗೆ ಮಾಡಿದೆ.

ಯಾಕಂದ್ರೆ ಜೀವನದಲ್ಲಿ ಗೆಳೆಯ ಗೆಳತಿಯರನ್ನ ಆಯ್ಕೆ ಮಾಡೋವಾಗ ತುಂಬಾ ಹುಷಾರಾಗಿರಿ ಅಂತ ರಶ್ಮಿಕಾ ಬರೆದಿದ್ದಾರೆ. ಸಣ್ಣ ಹುಡುಗ ಹುಡುಗಿಯರೇ ಫ್ರೆಂಡ್ಸ್ ಮಾಡಿಕೊಳ್ಳುವಾಗ ತುಂಬಾ ಹುಷಾರಿಗಿರಿ. ಯಾರು ಕೆಟ್ಟವರಾಗಿರಲ್ಲ. ಹಾಗಂತ ಅವರು ನಿಮಗೆ ಒಳ್ಳೆವರು ಆಗಿರಲ್ಲ.

ಇವತ್ತಿನ ನಿಮ್ಮ ಫ್ರೆಂಡ್ಸ್ ನಾಳೆ ನಿಮ್ಮವರಾಗಿರಲ್ಲ. ಹಾಗಾಗಿ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ತುಂಬಾ ಮುಖ್ಯ. ನಿಮ್ಮ ತಂದೆ ತಾಯಿಯನ್ನ ಗೌರವಿಸಿ. ಜಗತ್ತಿನಲ್ಲಿ ಯಾರು ಪ್ರೀತಿ ಮಾಡದಷ್ಟು ಅವರು ನಿಮ್ಮನ್ನು ಪ್ರೀತಿ ಮಾಡ್ತಾರೆ. ಅವರ ಮಾತು ಕೇಳಿ ಮತ್ತು ಅವರನ್ನ ನಂಬಿ. ಅಪ್ಪ, ಅಮ್ಮನ ಟೇಕನ್ ಫಾರ್ ಗ್ರಾಂಟೈಡ್ ತಗೋಬೇಡಿ ಅಂತ ಸಲಹೆ ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow