ನಿಮಗಿದು ಗೊತ್ತಾ!? ನಾವು ಪೂಜೆ ಮಾಡುವಾಗ ಈ ಬಣ್ಣದ ಬಟ್ಟೆ ಧರಿಸಬಾರದಂತೆ!

ಮೇ 6, 2025 - 07:12
 0  9
ನಿಮಗಿದು ಗೊತ್ತಾ!? ನಾವು ಪೂಜೆ ಮಾಡುವಾಗ ಈ ಬಣ್ಣದ ಬಟ್ಟೆ ಧರಿಸಬಾರದಂತೆ!

ಹಿಂದೂಗಳು ಪ್ರತಿನಿತ್ಯ ಯಾವುದೇ ಕೆಲಸ ಮಾಡುವುದನ್ನು ತಪ್ಪಿಸಿದರೂ ಮುಂಜಾನೆ ಮತ್ತು ಸಂಜೆ ದೇವರ ಪೂಜೆ ಮಾಡುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ವಾರದ ಪ್ರತಿಯೊಂದು ದಿನವನ್ನು ಒಂದಲ್ಲ ಒಂದು ದೇವರ ಆರಾಧನೆಗೆ ಸಮರ್ಪಿಸಲಾಗುತ್ತದೆ. ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಎನ್ನುವಂತಹದ್ದು ನೆಲೆಯಾಗುತ್ತದೆ. ಹಾಗೂ ವ್ಯಕ್ತಿಯು ಜೀವನದಲ್ಲಿ ಐಶ್ವರ್ಯವನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಪೂಜೆ ಕೈಂಕರ್ಯವನ್ನು ನಿಯಮಾನುಸಾರ ಮಾಡುತ್ತಾರೆ. 

ಏನೇ ಶುಭ ಕಾರ್ಯಕ್ಕೂ ಮುನ್ನ ಗಣೇಶ ಅಥವಾ ತಮ್ಮ ಕುಲ ದೇವರಿಗೆ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ಧತಿ. ಇದಲ್ಲದೇ ಪೂಜೆಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ. ಇಂದು ಪೂಜೆಯ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು ಮತ್ತು ಯಾವ ಬಣ್ಣದ ಬಟ್ಟೆ ಧರಿಸಲೇ ಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ ಮತ್ತು ಯಾವುದು ಅಶುಭ ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ವಿಡಿಯೋದಲ್ಲಿ ಗುರೂಜಿಯವರು ಪೂಜೆ ಸಮಯದಲ್ಲಿ ಧರಿಸಬೇಕಾದ ಬಟ್ಟೆಯ ಬಣ್ಣಗಳ ಕುರಿತು ವಿವರಿಸಿರುವುದನ್ನು ಕಾಣಬಹುದು.

ಡಾ. ಬಸವರಾಜ ಗುರೂಜಿಯವರು ಹೇಳುವಂತೆ ” ಬಿಳಿ ಮತ್ತು ಹಳದಿ ಬಣ್ಣಗಳು ಪೂಜೆಗೆ ಅತ್ಯಂತ ಶ್ರೇಷ್ಠ. ಈ ಬಣ್ಣಗಳು ಮಾನಸಿಕ ಶಾಂತಿಯನ್ನು ನೀಡುತ್ತವೆ. ಆದರೆ ಎಂದಿಗೂ ಕಪ್ಪು ಬಣ್ಣವನ್ನು ಪ್ರತಿದಿನದ ಪೂಜೆಗೆ ಬಳಸಬಾರದು. ಇದರಿಂದ ಶುಭ ಫಲಕ್ಕಿಂತ ಅಶುಭ ಫಲಗಳೇ ಹೆಚ್ಚು. ಇದಲ್ಲದೇ ದೇವಿಯ ಪೂಜೆಯ ವೇಳೆ ಕೆಂಪು ಬಣ್ಣದ ಬಟ್ಟೆ ಧರಿಸುವುದು ಸೂಕ್ತ. ಆದರೆ ಯಾವುದೇ ಬಟ್ಟೆಯನ್ನು ಧರಿಸಿದರೂ ಅದು ಶುಚಿಯಾಗಿರಬೇಕು. ಪೂಜೆಯ ಸಮಯದಲ್ಲಿ ಕೊಳಕು ಹಾಗೂ ಹರಿದ ಬಟ್ಟೆಯನ್ನು ಧರಿಸಬೇಡಿ” ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow