ನಿರುದ್ಯೋಗಿಗಳ ಗಮನಕ್ಕೆ: SSLC, ITI ಪಾಸಾಗಿದ್ಯಾ!? ಇಲ್ಲಿದೆ ಭರ್ಜರಿ ಉದ್ಯೋಗ!

ಮೇ 6, 2025 - 08:21
 0  10
ನಿರುದ್ಯೋಗಿಗಳ ಗಮನಕ್ಕೆ: SSLC, ITI ಪಾಸಾಗಿದ್ಯಾ!? ಇಲ್ಲಿದೆ ಭರ್ಜರಿ ಉದ್ಯೋಗ!

 ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು ದೊಡ್ಡ ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. 

ಭಾರತ ಸರ್ಕಾರದಡಿಯ ರೈಲ್ವೆ ನೇಮಕಾತಿ ಮಂಡಳಿ ಬೃಹತ್ ಉದ್ಯೋಗಗಳನ್ನು ಕುರಿತಂತೆ ನೋಟಿಫಿಕೇಶನ್ ಅನ್ನು ಈಗಾಗಲೇ ರಿಲೀಸ್ ಮಾಡಿದೆ. ದೇಶದ್ಯಾಂತ ರೈಲ್ವೆ ವಲಯಗಳಲ್ಲಿ ಕೆಲಸಗಳು ಖಾಲಿ ಇವೆ. ಇವುಗಳಲ್ಲಿ ಪೂರ್ವ ಕರಾವಳಿ ರೈಲ್ವೆ, ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಇವುಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ-

10ನೇ ತರಗತಿ ಜೊತೆಗೆ ಐಟಿಐ ಅಥವಾ

ಇಂಜಿನಿಯರಿಂಗ್, ಡಿಪ್ಲೋಮಾ

ಅರ್ಜಿ ಶುಲ್ಕ ಎಷ್ಟು ಇರುತ್ತದೆ?

ಜನರಲ್, ಒಬಿಸಿ- 500 ರೂಪಾಯಿಗಳು

ಎಸ್ಸಿ, ಎಸ್ಟಿ- 250 ರೂಪಾಯಿಗಳು

ವಯೋಮಿತಿ-

18 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ ಹೇಗಿದೆ?

ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ 1)

ಸಿಬಿಟಿ 1 ಪಾಸ್ ಆದ್ರೆ ಸಿಬಿಟಿ 2 ಟೆಸ್ಟ್

ಕಂಪ್ಯೂಟರ್ ಬೇಸ್ಡ್ ಅಪ್ಟಿಟ್ಯೂಟ್ ಟೆಸ್ಟ್ (ಸಿಬಿಎಟಿ)

ದಾಖಲೆ ಪರಿಶೀಲನೆ

ವೈದ್ಯಕೀಯ ಪರಿಶೀಲನೆ

ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 11 ಮೇ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow