ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ ಸಲ್ಮಾನ್ ಖಾನ್ ಒಬ್ಬರೇ ಅಲ್ಲ: ಜೈಲಿನಲ್ಲಿನ ಆ ಖದೀಮರಿಗೂ ಟಾರ್ಗೆಟ್ ಫಿಕ್ಸ್ ಆಗಿತ್ತು!!!

ನವೆಂಬರ್ 17, 2024 - 17:55
 0  20
ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ ಸಲ್ಮಾನ್ ಖಾನ್ ಒಬ್ಬರೇ ಅಲ್ಲ: ಜೈಲಿನಲ್ಲಿನ ಆ ಖದೀಮರಿಗೂ ಟಾರ್ಗೆಟ್ ಫಿಕ್ಸ್ ಆಗಿತ್ತು!!!

ಸೂಪರ್​ ಸ್ಟಾರ್​ ಸಲ್ಮಾನ್​ ಕಾನ್​ ಟಾರ್ಗೆಟ್​ ಮಾಡಿದ್ದ ಬಿಷ್ಣೋಯ್​ ಗ್ಯಾಂಗ್​ನ ಮತ್ತೊಂದು ಟಾರ್ಗೆಟ್​ ಸೀಕ್ರೆಟ್​ ಬಟಾಬಯಲಾಗಿದೆ. 

2022ರಲ್ಲಿ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್​ನ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲಾ ಸದ್ಯ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾನೆ ಅನ್ನೋ ಸೀಕ್ರೆಟ್​ ಬಯಲಾಗಿದೆ. ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಪ್ರಕರಣದ ತನಿಖೆ ವೇಳೆ ಪೂನಾವಾಲಾ ಕೂಡ ಬಿಷ್ಣೋಯ್ ಶೂಟರ್‌ಗಳ ಹಿಟ್ ಲಿಸ್ಟ್​ನಲ್ಲಿದ್ದ ಎಂಬ ಸತ್ಯ ಗೊತ್ತಾಗಿದೆ. ಅಫ್ತಾಬ್ ಪೂನಾವಾಲಾ ಸದ್ಯ ತಿಹಾರ್ ಜೈಲಿನಲ್ಲಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.

NIA ಮಾಹಿತಿ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಹಲವಾರು ವ್ಯಕ್ತಿಗಳನ್ನು ಹಿಟ್ ಲಿಸ್ಟ್​ನಲ್ಲಿ ಸೇರಿಸಿಕೊಂಡಿದೆ ಎಂದು ತಿಳಿದುಬಂದಿದೆ. ಈ ಪ್ರಕಾರ ಕೃಷ್ಣಮೃಗ ಭೇಟೆ ಆರೋಪದಲ್ಲಿ ಪ್ರತೀಕಾರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ ವಾಲಾ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್.. ಗುರುಗ್ರಾಮ್‌ ಜೈಲಿನಲ್ಲಿರುವ ದರೋಡೆಕೋರರಾದ ಕೌಶಲ್ ಚೌಧರಿ ಮತ್ತು ಅಮಿತ್ ದಾಗರ್ ಕೂಡ ಟಾರ್ಗೆಟ್​ ಆಗಿದ್ದಾರೆ.

11 ರಾಜ್ಯಗಳಾದ್ಯಂತ 700ಕ್ಕೂ ಹೆಚ್ಚು ಶೂಟರ್‌ಗಳ ವ್ಯಾಪಕ ಜಾಲವನ್ನ ಬಿಷ್ಣೋಯ್ ಗ್ಯಾಂಗ್ ಹೊಂದಿದೆ. ಸದ್ಯ ಬಿಷ್ಣೋಯ್ ಅಹಮದಾಬಾದ್‌ನ ಸಬರಮತಿ ಜೈಲಿನಲ್ಲಿ ಸೆರೆವಾಸದಲ್ಲಿದ್ದಾನೆ. ಸದ್ಯ ಈ ಗ್ಯಾಂಗ್​ನ ರುವಾರಿಯಯನ್ನ ಲಾರೆನ್ಸ್ ಸಹೋದರ ಅನ್ಮೋಲ್ ಬಿಷ್ಣೋಯ್ ಮತ್ತು ಇನ್ನೊಬ್ಬ ಕುಖ್ಯಾತ ದರೋಡೆಕೋರ ಗೋಲ್ಡಿ ಬ್ರಾರ್ ಮುನ್ನಡೆಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow