ಪ್ರಧಾನಿ ಮೋದಿ ಗಿಫ್ಟ್ ಕೊಟ್ಟಿದ್ದ ಚಿನ್ನದ ಕಿರೀಟ ಕಳ್ಳತನ: ಶಕ್ತಿ ಪೀಠದಲ್ಲಿ ಕಳ್ಳನ ಕರಾಮತ್ತು!

ಅಕ್ಟೋಬರ್ 11, 2024 - 20:02
 0  16
ಪ್ರಧಾನಿ ಮೋದಿ ಗಿಫ್ಟ್ ಕೊಟ್ಟಿದ್ದ ಚಿನ್ನದ ಕಿರೀಟ ಕಳ್ಳತನ: ಶಕ್ತಿ ಪೀಠದಲ್ಲಿ ಕಳ್ಳನ ಕರಾಮತ್ತು!

ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ಕೊಟ್ಟಿದ್ದ ಚಿನ್ನದ ಕಿರೀಟ ಕಳ್ಳತನವಾಗಿರುವ ಘಟನೆ ಬಾಂಗ್ಲಾದೇಶದ ಸಖ್ತೀರಾದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಜರುಗಿದೆ. 

ಕಳ್ಳತನವಾಗಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ತೆಗೆದುಕೊಂಡು ಹೋಗ್ತಿರುವ ದೃಶ್ಯ ಬಹಿರಂಗಗೊಂಡಿವೆ. ಚಿನ್ನದ ಕಿರೀಟವನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದರು.

ಬಾಂಗ್ಲಾದೇಶದ ಈ ಕಾಳಿ ದೇವಸ್ಥಾನದ ಕಿರೀಟಕ್ಕೂ ಪ್ರಧಾನಿ ಮೋದಿಗೂ ವಿಶೇಷ ಸಂಬಂಧ ಇದೆ. 2021ರಲ್ಲಿ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಅದೇ ಚಿನ್ನದ ಕಿರೀಟ ಕಳ್ಳತನವಾಗಿದೆ.

 ಮಧ್ಯಾಹ್ನ 2:47 ರಿಂದ 2:50 ರ ನಡುವೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಅರ್ಚಕ ದಿಲೀಪ್ ಕುಮಾರ್ ಬ್ಯಾನರ್ಜಿ ದೈನಂದಿನ ಪೂಜೆಯನ್ನು ಪೂರ್ಣಗೊಳಿಸಿದ ನಂತರ, ದೇವಾಲಯದ ಬೀಗಗಳನ್ನು ನಿರ್ವಹಣೆ ಮಾಡುವ ವ್ಯಕ್ತಿಗೆ ನೀಡಿದ್ದರು.

ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ರೇಖಾ ಸರ್ಕಾರ್‌, ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ. ಈ ವೇಳೆ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow