ಪ್ರೀತಿಸಿ ಮಗು ಕೊಟ್ಟವನು ಮದುವೆಗೆ ಒಲ್ಲೆ ಎಂದ ಜಿಮ್ ಟ್ರೈನರ್..! ಮುಂದೇನಾಯ್ತು..?

ದೊಡ್ಡಬಳ್ಳಾಪುರ: ಪ್ರೀತಿಯ ಹೆಸರಲ್ಲಿ ಮಹಿಳೆಗೆ ವಂಚಿಸಿದ್ದಷ್ಟೇ ಅಲ್ಲದೇ ಆಕೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲ್ಲೂಕಿನ ಕರೇನಹಳ್ಳಿಯಲ್ಲಿ ನಡೆದಿದೆ. ಜಿಮ್ ಟ್ರೈನರ್ ಗೌತಮ್ ಎಂಬುವವನ ಜೊತೆ ಎಂಟು ವರ್ಷದಿಂದ ಪ್ರೀತಿ ಪ್ರೇಮದ ಬಲೆಗೆ ಯುವತಿ ಬಿದ್ದಿದ್ದು ಗರ್ಭಿಣಿಯಾಗಿದ್ದಳು.
ಆದರೆ, ಅಂದು ಈಕೆಯನ್ನು ಗರ್ಭಿಣಿ ಮಾಡಿದ್ದ ಗೌತಮ್, ಮತ್ತೊಬ್ಬಳ ಜೊತೆ ಸುತ್ತಾಡುತ್ತಿದ್ದ. ಅದನ್ನು ಕಂಡ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೆ, ನನ್ನ ಮಗುವಿಗೆ ತಂದೆ ಗೌತಮ್ ಎಂದು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರು. ಬಳಿಕ ಈ ಕೇಸ್ ವಾಪಸ್ ಪಡೆಯುವಂತೆ ಮಹಿಳೆ ಬಳಿ ಕುಟುಂಬಸ್ಥರು ಮಾತುಕತೆ ನಡೆಸಿದ್ರು. ರಾಜಿ ಪಂಚಾಯತಿ ನಡೆಸಲು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಆದ್ರೆ ಮಹಿಳೆ ಮತ್ತು ಮಗುವನ್ನ 20 ದಿನಗಳಿಂದ ಮನೆಯಲ್ಲೇ ಇರಿಸಿಕೊಂಡು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಜೊತೆಗೆ, ಉರಿಯುತ್ತಿದ್ದ ಬೆಂಕಿಗೆ ಮಹಿಳೆಯನ್ನು ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಗೌತಮ್ ಮತ್ತೊಂದು ಮದುವೆ ಆಗಲು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಬೆಂಕಿಗೆ ತಳ್ಳಲು ಯತ್ನಿಸಿದ್ದು ಹಾಗೂ ಹೊತ್ತಿ ಉರಿಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






