ಭಯಾನಕ ಘಟನೆ: ಶಾಲಾ ಬಾಲಕಿ ಕುತ್ತಿಗೆಗೆ ಚಾಕು ಇಟ್ಟು ಪಾಗಲ್ ಪ್ರೇಮಿ ಹುಚ್ಚಾಟ!

ಜುಲೈ 22, 2025 - 22:06
 0  7
ಭಯಾನಕ ಘಟನೆ: ಶಾಲಾ ಬಾಲಕಿ ಕುತ್ತಿಗೆಗೆ ಚಾಕು ಇಟ್ಟು ಪಾಗಲ್ ಪ್ರೇಮಿ ಹುಚ್ಚಾಟ!

ಮಹಾರಾಷ್ಟ್ರ:- ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿಯನ್ನು ತಡೆದು ಕುತ್ತಿಗೆಗೆ ಚಾಕು ಹಿಡಿದು ನೀನು ನನ್ನನ್ನು ಲವ್ ಮಾಡು ಎಂದು ಪಾಗಲ್ ಪ್ರೇಮಿ ಬೆದರಿಕೆ ಹಾಕಿರುವ ಘಟನೆ ಜರುಗಿದೆ. 

ನಾನು ನಿನ್ನ ಪ್ರೀತಿ ಮಾಡುತ್ತಿದ್ದೇನೆ, ನೀನು ಯಾಕೆ ಪ್ರೀತಿಸುತ್ತಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಬಾಲಕಿ ಪ್ರೀತಿ ಮಾಡೊದಿಲ್ಲ ಎಂದಿದ್ದಕ್ಕೆ ಆಕೆಯ ಕುತ್ತಿಗೆಗೆ ಚಾಕು ಹಿಡಿದು ಹುಚ್ಚಾಟ ಮೆರೆದಿದ್ದಾನೆ. 

ಆತನಿಂದ ಬಾಲಕಿಯನ್ನು ತಪ್ಪಿಸಲು ಜನ ಹಿಂದೇಟು ಹಾಕಿದ್ದಾರೆ. ಕೆಲವು ಹೊತ್ತು ಅದೇ ರೀತಿಯ ಹೈಡ್ರಾಮಾ ನಡೆಯಿತು. ನಂತರ ಹಿಂದಿನಿಂದ ಬಂದ ಯುವಕನೊಬ್ಬ ಆತನ ಕೈಯಲ್ಲಿದ್ದ ಚಾಕುವನ್ನ ಕಿತ್ಕೊಂಡಿದ್ದಾನೆ.

ನಂತರ ಆತನನ್ನು ಉಳಿದವರು ಹಿಡಿದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕೊನೆಗೆ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ಪಾಗಲ್ ಪ್ರೇಮಿಯಿಂದ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿದ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಂಜೆ ಎಂಬಲ್ಲಿ ಘಟನೆ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow