Bagalakote: ಸ್ವಂತ ಅಣ್ಣನ ಮಗನನ್ನೇ ಕತ್ತು ಸೀಳಿ ಕೊ*ಂದ ಪಾಪಿ..!

ಜುಲೈ 22, 2025 - 16:16
 0  9
Bagalakote: ಸ್ವಂತ ಅಣ್ಣನ ಮಗನನ್ನೇ ಕತ್ತು ಸೀಳಿ ಕೊ*ಂದ ಪಾಪಿ..!

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಬೆನಕನವಾರಿ ಗ್ರಾಮದ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಾರುತಿ ವಾಲಿಕಾರ ಅವರ 3 ವರ್ಷದ ಮಗುವನ್ನು ಅವನೇ ಸಹೋದರ ಭೀಮಪ್ಪ ವಾಲಿಕಾರ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಮಗು ಅಂಗನವಾಡಿಗೆ ತೆರಳುತ್ತಿದ್ದ ವೇಳೆ ಬಾಲಕನನ್ನು ಭೀಮಪ್ಪ ವಾಲಿಕಾರ ಮನೆಗೆ ಕರೆದುಕೊಂಡು ಹೋಗಿ, ಕತ್ತಿಯಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ವರದಿಾಗಿದೆ.

ಪ್ರಕರಣ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬೀರಪ್ಪ ಹನುಮಪ್ಪ ವಾಲಿಕಾರ (35) ಎಂದು ಗುರುತಿಸಲಾಗಿದೆ. ಭೀಕರ ಘಟನೆ ಗ್ರಾಮದಲ್ಲಿ ಭಯ ಮತ್ತು ಆಕ್ರೋಶವನ್ನು ಸೃಷ್ಟಿಸಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow